ETV Bharat / crime

ಸೋಪ್​ ಬಾಕ್ಸ್​ಗಳಲ್ಲಿಟ್ಟು ಸಾಗಿಸಲಾಗುತ್ತಿದ್ದ 47 ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ವಶ - ಬಿಎಸ್‌ಎಫ್ ಯೋಧರು ಮತ್ತು ಅಸ್ಸಾಂ ಪೊಲೀಸರು

ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಬಿಎಸ್​ಎಫ್​ ಯೋಧರು, ಅಕ್ರಮವಾಗಿ ಡ್ರಗ್ಸ್ (ಬಹುಶಃ ಬ್ರೌನ್ ಶುಗರ್)​ ಸಾಗಿಸಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಕ್ಟೋಬರ್ 11 ರಂದು ಮಿಜೋರಾಂ ನಿಂದ ಬಂದು ತ್ರಿಪುರಾ ಕಡೆಗೆ ಹೊರಟಿದ್ದ ಟ್ರಕ್ ಒಂದನ್ನು ಕರೀಮ್​ಗಂಜ್ ಬಳಿ ತಡೆದು ತಪಾಸಣೆ ನಡೆಸಿದರು. ಕರೀಮಗಂಜ್ ರೈಲ್ವೆ ಸ್ಟೇಷನ್ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಿಕ್ಕುಬಿದ್ದ AS-11- BC-7975 ನೋಂದಣಿ ಸಂಖ್ಯೆಯ ಟ್ರಕ್​ ನಲ್ಲಿ ಹೆರಾಯಿನ್ ತುಂಬಿದ್ದ 764 ಸಾಬೂನು ಬಾಕ್ಸ್​ಗಳು ಪತ್ತೆಯಾಗಿವೆ.

ಸೋಪ್​ ಬಾಕ್ಸ್​ಗಳಲ್ಲಿಟ್ಟು ಸಾಗಿಸಲಾಗುತ್ತಿದ್ದ 47 ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ವಶ
Brown sugar of value 47 crores were transported in soap boxes
author img

By

Published : Oct 12, 2022, 11:49 AM IST

ಅಗರ್ತಲಾ: ಅಸ್ಸೋಂ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಮತ್ತು ಅಸ್ಸೋಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 47 ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್​ ಮಿಜೋರಾಂನಿಂದ ಬಂದು ತ್ರಿಪುರಾಗೆ ಹೋಗಲಿತ್ತು.

ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಬಿಎಸ್​ಎಫ್​ ಯೋಧರು, ಅಕ್ರಮವಾಗಿ ಡ್ರಗ್ಸ್ (ಬಹುಶಃ ಬ್ರೌನ್ ಶುಗರ್)​ ಸಾಗಿಸಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಕ್ಟೋಬರ್ 11 ರಂದು ಮಿಜೋರಾಂ ನಿಂದ ಬಂದು ತ್ರಿಪುರಾ ಕಡೆಗೆ ಹೊರಟಿದ್ದ ಟ್ರಕ್ ಒಂದನ್ನು ಕರೀಮ್​ಗಂಜ್ ಬಳಿ ತಡೆದು ತಪಾಸಣೆ ನಡೆಸಿದರು. ಕರೀಮಗಂಜ್ ರೈಲ್ವೆ ಸ್ಟೇಷನ್ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಿಕ್ಕುಬಿದ್ದ AS-11- BC-7975 ನೋಂದಣಿ ಸಂಖ್ಯೆಯ ಟ್ರಕ್​ ನಲ್ಲಿ ಹೆರಾಯಿನ್ ತುಂಬಿದ್ದ 764 ಸಾಬೂನು ಬಾಕ್ಸ್​ಗಳು ಪತ್ತೆಯಾಗಿವೆ.

ಟ್ರಕ್ ಕ್ಯಾಬಿನ್ ಮೇಲೆ ರಹಸ್ಯವಾಗಿ ಅಡಗಿಸಿ ಇಡಲಾಗಿದ್ದ 9.477 ಕೆಜಿ ತೂಕದ ಹೆರಾಯಿನ್​ ಬಾಕ್ಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಮಾದಕ ವಸ್ತುಗಳ ಒಟ್ಟು ಮೌಲ್ಯ 47 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ ಎಂದು ಬಿಎಸ್​ಎಫ್​ ಹೇಳಿದೆ. ಟ್ರಕ್ ಚಾಲಕನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಬಂಧಿತ ಟ್ರಕ್ ಚಾಲಕ ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಪ್ರಸ್ತುತ ಮುಂದಿನ ಕಾನೂನು ಕ್ರಮಕ್ಕಾಗಿ ಕರೀಂಗಂಜ್ ಪೊಲೀಸರ ವಶದಲ್ಲಿರಿಸಲಾಗಿದೆ.

ಇದನ್ನೂ ಓದಿ: 76 ಲಕ್ಷ ರೂ. ಮೌಲ್ಯದ ಬ್ರೌನ್​ ಶುಗರ್ ಸಾಗಾಟಕ್ಕೆ ಯತ್ನ... ಓರ್ವನನ್ನು ಬಂಧಿಸಿದ ಭದ್ರತಾ ಸಿಬ್ಬಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.