ETV Bharat / crime

ಅಪ್ರಾಪ್ತೆ ಅಪಹರಣ, ಅತ್ಯಾಚಾರ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಅಣ್ಣ, ತಂಗಿ: 15 ವರ್ಷಗಳ ಬಳಿಕ ಬಂಧನ

13 ವರ್ಷದ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಒಂದೂವರೆ ದಶಕದಿಂದ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ದೆಹಲಿಯ ಕ್ರೈಮ್‌ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಒಡಹುಟ್ಟಿದವರಾಗಿದ್ದಾರೆ.

author img

By

Published : Mar 31, 2022, 1:26 PM IST

Updated : Mar 31, 2022, 3:27 PM IST

brother and sister absconding for 15 years arrested in kidnapping and rape case
ಅಪ್ರಾಪ್ತೆ ಅಪಹರಣ, ಅತ್ಯಾಚಾರ ಪ್ರಕರಣದಲ್ಲಿ ನಾಪ್ತೆಯಾಗಿದ್ದ ಅಣ್ಣ, ತಂಗಿ 15 ವರ್ಷಗಳ ಬಳಿಕ ಬಂಧನ

ನವದೆಹಲಿ: ಅಪ್ರಾಪ್ತೆ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಒಡಹುಟ್ಟಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ. 2009 ರಲ್ಲಿ ಕೋರ್ಟ್‌ ಕೂಡ ಇವರನ್ನು ಪರಾರಿಯಾದ ವ್ಯಕ್ತಿ ಎಂದು ಘೋಷಿಸಿತ್ತು. ಸದ್ಯ ಬಂಧನದ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

2006 ರಲ್ಲಿ ನಂಗ್ಲೋಯ್ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2016ರ ಏಪ್ರಿಲ್ 14 ಮಧ್ಯಾಹ್ನ ತನ್ನ 13 ವರ್ಷದ ಮಗಳು ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಳು, ಆದರೆ ಮನೆಗೆ ಹಿಂತಿರುಗಲಿಲ್ಲ ಎಂದು ಬಾಲಕಿ ತಂದೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು ಎಂದು ಡಿಸಿಪಿ ದೀಪಕ್ ಯಾದವ್ ತಿಳಿಸಿದ್ದಾರೆ.

ಅಪ್ರಾಪ್ತೆ ಅಪಹರಣದ ಹಿಂದೆ ಇಬ್ಬರ ಕೈವಾಡವಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆಯ ವೇಳೆ ಪೊಲೀಸರು ಈ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದರು, ಆದರೆ ಆ ವೇಳೆಗಾಗಲೇ ಇಬ್ಬರೂ ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಒಂದೂವರೆ ದಶಕದ ಬಳಿಕ ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ಎಪಿ ಮಹೇಶ್ ಬ್ಯಾಂಕ್ ಹ್ಯಾಕಿಂಗ್ ಪ್ರಕರಣ; 23 ಜನರ ಬಂಧನ, ತನಿಖೆಗಾಗಿ 58 ಲಕ್ಷ ರೂ. ಖರ್ಚು ಎಂದ ಪೊಲೀಸ್​ ಇಲಾಖೆ

Last Updated : Mar 31, 2022, 3:27 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.