ಬೆಂಗಳೂರು : ಗೆಳೆಯನ ಜೊತೆ ಕಳೆದ ಖಾಸಗಿ ವಿಡಿಯೋ ಇಟ್ಟುಕೊಂಡು ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಯುವಕನ ವಿರುದ್ದ ನಗರ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರ ಮೂಲದ 20 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಸಿಎಎನ್ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ 2019ರಲ್ಲಿ ಸ್ಯಾಮ್ ಎಂಬಾತ ಪರಿಚಯವಾಗಿ ಗೆಳೆತನ ಬೆಳೆಸಿಕೊಂಡಿದ್ದಳು.
ಆಗ ಸ್ಯಾಮ್ ತಾನು ಯುವತಿ ಜೊತೆ ಇರುವ ಖಾಸಗಿ ಕ್ಷಣದ ವಿಡಿಯೋಗಳನ್ನು ಆಕೆಗೆ ಅರಿವಿಲ್ಲದಂತೆ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ನಂತರ ದಿನಗಳಲ್ಲಿ ಕೆಲ ಕಾರಣಗಳಿಂದ ಇಬ್ಬರು ದೂರವಾಗಿದ್ದರು.
ಆಗ ಸ್ಯಾಮ್ ಆ ವಿಡಿಯೋಗಳನ್ನು ಯುವತಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದರಿಂದ ರೋಸಿಹೋಗಿದ್ದ ಯುವತಿ ಸ್ಯಾಮ್ಗೆ ಬೈದಿದ್ದಳು. ತದನಂತರ ಸ್ಯಾಮ್ ಸುಮ್ಮನಾಗಿದ್ದ.
ಸದ್ಯ ಕೆಲ ದಿನಗಳಿಂದ ಶ್ಯಾಮ್ ಎಂಬ ಹೆಸರಿನ ಇನ್ಸ್‌ಸ್ಟಾಗ್ರಾಮ್ ಐಡಿಯಿಂದ ಆಶ್ಲೀಲವಾಗಿ ಯುವತಿಗೆ ಸಂದೇಶ ಬಂದಿದೆ. ಇದರಿಂದ ಅಸಮಾಧಾನಗೊಂಡ ಯುವತಿ ಹಳೆ ಗೆಳೆಯ ಸ್ಯಾಮ್ ಈ ಕೆಲಸ ಮಾಡಿರುವುದಾಗಿ ತಿಳಿದು ಕಿಡಿಕಾರಿದ್ದಾಳೆ. ಆದ್ರೆ, ಕೆಲವು ತಿಂಗಳ ಬಳಿಕ ಮತ್ತೆ ಆಕೆಯ ಅಶ್ಲೀಲ ಫೋಟೋ ಅವಳ ಫೋನ್ಗೆ ಬಂದಿತ್ತು.
ನಂತರ ಸ್ಯಾಮ್ನೊಂದಿಗೆ ನೀನು ಇದ್ದ ಖಾಸಗಿ ವಿಡಿಯೋ ನನ್ನ ಬಳಿ ಇದೆ, ನೀನು ಕೇಳಿದಷ್ಟು ಹಣ ಕೊಡುತ್ತೇನೆ, ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸು.
ಸ್ಯಾಮ್ ನನಗೆ ನಿನ್ನ ಅಶ್ಲೀಲ ವಿಡಿಯೋ ಕಳುಹಿಸಿದ್ದಾನೆ. ನನ್ನೊಂದಿಗೆ ಸಹಕರಿಸು ಎಂಬ ಅಸಭ್ಯ ಸಂದೇಶ ಬಂದಿದೆ. ಸದ್ಯ ಯುವತಿ ಸ್ಯಾಮ್ ಈ ಕೆಲಸ ಮಾಡಿರುವುದಾಗಿ ಅನುಮಾನಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿದ್ದಾಳೆ.