ETV Bharat / crime

20 ಸಾವಿರ ಲಂಚ ಪಡೆಯುವಾಗ ರೆಡ್​ಹ್ಯಾಂಡಾಗಿ ಸಿಕ್ಕಿ ಬಿದ್ದ ಟ್ರಾಫಿಕ್ ಇನ್ಸ್​ಪೆಕ್ಟರ್

20 ಸಾವಿರ ರೂಪಾಯಿ ಲಂಚ ಕೇಳಿದ ಆರೋಪದಲ್ಲಿ ಚಿಕ್ಕಜಾಲ ಟ್ರಾಫಿಕ್ ಇನ್ಸ್​​​ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ಕೇಂದ್ರ ಸರ್ಕಾರದ ಗೇಲ್​​ ಗ್ಯಾಸ್ ಕಂಪನಿಯವರು ಎಸಿಬಿಗೆ ದೂರು ನೀಡಿದ್ದರು.

bengaluru-traffic-inspector-arrested-for-bribe
20 ಸಾವಿರ ಲಂಚ ಪಡೆಯುವಾಗ ರೆಡ್​ಹ್ಯಾಂಡಾಗಿ ಸಿಕ್ಕಿ ಬಿದ್ದ ಟ್ರಾಫಿಕ್ ಇನ್ಸ್​ಪೆಕ್ಟರ್
author img

By

Published : Apr 21, 2022, 10:12 AM IST

ಯಲಹಂಕ(ಬೆಂಗಳೂರು) : ಗ್ಯಾಸ್ ಕಂಪನಿಯ ಪೈಪ್​ಲೈನ್ ಅಗೆಯಲು ಅನುಮತಿ ನೀಡುವ ವಿಚಾರಕ್ಕೆ 20 ಸಾವಿರ ಲಂಚ ಕೇಳಿದ ಆರೋಪದಲ್ಲಿ ಚಿಕ್ಕಜಾಲ ಟ್ರಾಫಿಕ್ ಇನ್ಸ್​​​ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಕೇಂದ್ರ ಸರ್ಕಾರದ ಗೇಲ್​​ ಗ್ಯಾಸ್ ಕಂಪನಿಯ ಪೈಪ್​ಲೈನ್ ಅಗೆಯುವ ವಿಚಾರಕ್ಕೆ ಅನುಮತಿ ನೀಡಲು ಚಿಕ್ಕಜಾಲ ಟ್ರಾಫಿಕ್ ಇನ್ಸ್​ಪೆಕ್ಟರ್​ ಹಂಸವೇಣಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪೈಪ್​ಲೈನ್​​ನವರು ಎಸಿಬಿಗೆ ದೂರು‌ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಹಣದ ಸಮೇತ ಇನ್ಸ್​ಪೆಕ್ಟರ್​ ಹಂಸವೇಣಿ ಸಿಕ್ಕಿಬಿದ್ದಾರೆ. ಕಳೆದ ವರ್ಷದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಹಂಸವೇಣಿ, ಕಳೆದ ಕೆಲವು ದಿನಗಳಿಂದ ರಸ್ತೆ ಅಗೆಯಲು ಅನುಮತಿಗಾಗಿ ಲಂಚಕ್ಕೆ‌ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಲಬುರಗಿ ಭೂಸ್ವಾಧೀನ ಕಚೇರಿ ಮೇಲೆ ಎಸಿಬಿ ದಾಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯವಸ್ಥಾಪಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.