ಚಾಮರಾಜನಗರ: ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ಧಾರಿ ಹಾದುಹೋಗುವ ಬಸವಾಪುರ ಗ್ರಾಮದ ಸಮೀಪ ಬಳಿ ನಡೆದಿದೆ.
ತಮಿಳುನಾಡು ಮೂಲದ ರಂಗಸ್ವಾಮಿ(35), ಸಂಜೀವಕುಮಾರ್(41), ಎನ್.ವಿನೋದ್(36), ಕದಿರೇಸನ್(45), ಸೆಲ್ವನಾಯಗಂ(44) ಬಂಧಿತ ಆರೋಪಿಗಳು. ಈ ಐವರು ಆನೆ ದಂತ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕಾರಿನಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದಾಗ ತಪಾಸಣೆಗೆ ಒಳಪಡಿಸಿದ ವೇಳೆ ಆನೆಯ ಎರಡು ದಂತ ಸಿಕ್ಕಿವೆ. ನಂತರ ಕಾರಿನ ಸಮೇತ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಗೆ ಬಳಕೆ ಮಾಡಿದ್ದ ಕಾರು ವಶಕ್ಕೆ ಪಡೆದು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಕಾಡುಹಂದಿಗಳ ದಿಢೀರ್ ಸಾವು: ಚಾಮರಾಜನಗರ ಕಾಡಂಚಿನ ರೈತರಲ್ಲಿ ಆತಂಕ