ETV Bharat / crime

ಟ್ರಕ್‌ - ಟ್ರ್ಯಾಕ್ಟರ್‌ ಮುಖಾಮುಖಿ ಡಿಕ್ಕಿ; ಐವರ ಸಾವು, 17 ಮಂದಿಗೆ ಗಾಯ - ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ

ಛತ್ತೀಸ್‌ಗಢದ ಗರಿಯಾಬಂದ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. 17 ಜನರು ಗಾಯಗೊಂಡಿದ್ದಾರೆ.

At least 5 dead, 17 injured in a collision between a truck and tractor at  Chhattisgarh
ಟ್ರಕ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ; ಐವರು ಸಾವು, 17 ಮಂದಿಗೆ ಗಾಯ
author img

By

Published : Mar 16, 2022, 7:07 AM IST

ರಾಯಪುರ(ಛತ್ತೀಸ್‌ಗಢ): ಟ್ರಕ್‌ ಮತ್ತು ಟ್ರ್ಯಾಕ್ಟರ್‌ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ ಐವರು ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ಗರಿಯಾಬಂದ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಭೀಕರ ಅಪಘಾತದಲ್ಲಿ 17 ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದ ಹೆಚ್ಚಿನವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಮೃತರ ಕುಟುಂಬಗಳಿಗೆ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್​ಗೆ ಗುದ್ದಿದ ವ್ಯಾನ್ : ಮೂವರು ಸಾವು, ನಾಲ್ವರಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.