ಹುಳಿಮಾವು: ರಾತ್ರಿ ಕುಡಿದ ಮತ್ತಿನಲ್ಲಿ ಸಾರ್ವಜನಿಕರಿಗೆ ಕೀಟಲೆ ಕೊಟ್ಟ ಆರೋಪದ ಮೇಲೆ ಹುಳಿಮಾವು ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಓದಿ: ಬಾಲಾಕೋಟ್ ದಾಳಿಗೆ 2 ವರ್ಷ: ನೆನಪಿಗೋಸ್ಕರ ನೈಜ ರೀತಿಯ ಅಭ್ಯಾಸ ನಡೆಸಿದ ವಾಯುಪಡೆ.. ವಿಡಿಯೋ
ಸಿಗರೇಟು ಹಿಡಿದು ಹುಚ್ಚುಚ್ಚಾಗಿ ಜನರನ್ನ ಪ್ರಶ್ನಿಸುತ್ತಿದ್ದ ವೇಳೆ ಸ್ಥಳೀಯರು ಹುಳಿಮಾವು ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಹರಿಹಾಯ್ದು, ವಿಡಿಯೋ ಮಾಡಿ ಗೊಂದಲ ಸೃಷ್ಟಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹುಳಿಮಾವು ಭಾಗದ ಬಸವನಪುರ ರಸ್ತೆಯಲ್ಲಿ ಕುಡಿದು ಗಲಾಟೆ ಮಾಡಿದ ಆರೋಪದ ಮೇಲೆ ಪೊಲೀಸರು ನಾಗೇಶ ಹೆಚ್.ವಿ. ಎಂಬ ವ್ಯಕ್ತಿಯನ್ನ ಬಂಧಿಸಿದ್ದಾರೆ. ಅಲ್ಲದೆ ಪೊಲೀಸರ ಮುಂದೆ ತನ್ನ ಪತ್ನಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ವಿಡಿಯೋ ದೃಶ್ಯಾವಳಿಗಳು ಲಭ್ಯವಿದ್ದು, ಇದರ ಆಧಾರದ ಮೇಲೆ ಹೊಯ್ಸಳ ಪೊಲೀಸರು ನಾಗೇಶನನ್ನು ಬಂಧಿಸಿ ಹುಳಿಮಾವು ಠಾಣೆಗೆ ಒಪ್ಪಿಸಿದ್ದಾರೆ.