ನವದೆಹಲಿ: ಟಿಕ್ರಿ ಗಡಿಯ ಪ್ರತಿಭಟನಾ ಸ್ಥಳದಿಂದ ಏಳು ಕಿಮೀ ದೂರದಲ್ಲಿರುವ ಮರದಲ್ಲಿ ನೇಣು ಬಿಗಿದುಕೊಂಡು ಹರಿಯಾಣದ ಹಿಸಾರ್ ಜಿಲ್ಲೆಯ 49 ವರ್ಷದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಆಂದೋಲನ ಬೆಂಬಲಿಸಿದ ರೈತ, ಸಾಯುವ ಮುನ್ನ ಪತ್ರ ಬರೆದಿಟ್ಟಿದ್ದಾನೆ.
ಸಂತ್ರಸ್ತ ರಾಜ್ಬೀರ್ ಹಿಸಾರ್ ಜಿಲ್ಲೆಯ ಹಳ್ಳಿಯವನು. ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಬಹದ್ದೂರ್‌ಗಢ್ ಸಿಟಿ ಪೊಲೀಸ್ ಠಾಣೆ ಎಸ್‌ಎಚ್‌ಒ ವಿಜಯ ಕುಮಾರ ದೂರವಾಣಿಯಲ್ಲಿ ತಿಳಿಸಿದ್ದಾರೆ.
ರಾಜ್ಬೀರ್ ತನ್ನ ಆತ್ಮಹತ್ಯೆ ಪತ್ರದಲ್ಲಿ 'ಮೂರು ಕೃಷಿ ಕಾನೂನುಗಳು ಆತ್ಮಹತ್ಯೆಗೆ ಕಾರಣ. ಕಾನೂನುಗಳನ್ನು ರದ್ದುಪಡಿಸುವ ಮೂಲಕ ಕೇಂದ್ರವು ತನ್ನ ಕೊನೆಯ ಆಶಯ ಈಡೇರಿಸಬೇಕು' ಎಂದು ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು: ಐವರಿಗೆ ಗಂಭೀರ ಗಾಯ
ಕಳೆದ ತಿಂಗಳು ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಬೆಂಬಲಿಸುತ್ತಿದ್ದ ಹರಿಯಾಣದ ಜಿಂದ್‌ನ ರೈತ ಕೂಡ ಟಿಕ್ರಿ ಗಡಿ ಪ್ರತಿಭಟನಾ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಮರದಲ್ಲಿ ನೇಣು ಹಾಕಿಕೊಂಡಿದ್ದ.
ಈ ಹಿಂದೆ ಹರಿಯಾಣದ ಮತ್ತೊಬ್ಬ ರೈತ ಟಿಕ್ರಿ ಗಡಿಯಲ್ಲಿ ವಿಷ ಸೇವಿಸಿದ್ದ. ನಂತರ ಆತನನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದ್ದರೂ ಮೃತಪಟ್ಟಿದ್ದ.