ETV Bharat / crime

ಕಡಬ: ಅನ್ಯಮತೀಯ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಯುವಕ ಅರೆಸ್ಟ್‌ - ದಕ್ಷಿಣ ಕನ್ನಡ ಜಿಲ್ಲೆ ಕ್ರೈಮ್‌ ನ್ಯೂಸ್‌

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿದ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಕೇಳಿ ಬಂದಿದ್ದು, ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

Allegations of sexual abuse by Young man; arrested in kadaba, dakshina kannada district
ಕಡಬ: ಅನ್ಯಮತೀಯ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಯುವಕ ಅರೆಸ್ಟ್‌
author img

By

Published : Mar 29, 2022, 7:00 AM IST

ಕಡಬ(ದಕ್ಷಿಣ ಕನ್ನಡ): ಅನ್ಯಮತೀಯ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಯುವತಿಯೇ ಕಡಬ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ನಡೆದಿದೆ. ಯುವತಿಯ ದೂರಿನ ಮೇರೆಗೆ ಮೋನು ಎಂಬವರ ಪುತ್ರ ಶಕೀರ್ ಎಂಬಾತನನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೂರಿನಲ್ಲೇನಿದೆ?: ಕಿರುಕುಳದ ಬಗ್ಗೆ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿರುವ ಯುವತಿ, ಮೋನು ಎಂಬುವರ ಪುತ್ರ ಶಕೀರ್ ಕಳೆದ ಎರಡು ದಿನಗಳಿಂದ ತನಗೆ ಕಿರುಕುಳ ನೀಡುತ್ತಿದ್ದು, ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ. ಕಳೆದೆರಡು ದಿನಗಳಿಂದ ಈತ ತೊಂದರೆ ಕೊಡುತ್ತಿರುವುದರಿಂದ ಈ ವಿಷಯವನ್ನು ಮನೆಯವರಿಗೂ ತಿಳಿಸಿದ್ದೇನೆ.

ಇಂದು ತಾನು ಕಡಬದಿಂದ ಕಲ್ಲಾಜೆ ಹೋಗುವ ವೇಳೆಯಲ್ಲಿ ಮನೆಯವರೂ ತನ್ನ ಜೊತೆಗೆ ಬಂದಿದ್ದು, ಇದೇ ವೇಳೆ ಯುವಕ ಮೈ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ಬಿಡಿಸಲು ಬಂದ ತನ್ನ ಅತ್ತೆಯವರಿಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ, ಬಂದ ವಾಹನದಲ್ಲಿ ಪರಾರಿಯಾದ ಎಂದು ಯುವತಿ ಕಡಬ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೂ ಸಂಘಟನೆ ಕಾರ್ಯಕರ್ತರ ಜಮಾವಣೆ! ಹಿಂದೂ ಯುವತಿಗೆ ಅನ್ಯಮತಿಯ ಯುವಕನಿಂದ ಲೈಂಗಿಕ ದೌರ್ಜನ್ಯ ಆಗಿರುವ ಆರೋಪದಲ್ಲಿ ಈ ಬಗ್ಗೆ ಯುವಕನ ವಿರುದ್ಧ ಕಾನೂನು ಕ್ರಮ‌ಕೈಗೊಳ್ಳಬೇಕೆಂದು ಆಗ್ರಹಿಸಿ ಕಡಬ ಠಾಣೆಯ ಎದುರು ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು.

ಇದನ್ನೂ ಓದಿ: ಮಂಗಳೂರು-ನವದೆಹಲಿ ನೇರ ವಿಮಾನಯಾನ ಇಂದಿನಿಂದ ಆರಂಭ : ವಾರದಲ್ಲಿ ನಾಲ್ಕು ದಿನ ಸೇವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.