ಹೈದ್ರಾಬಾದ್: ಟಿಟಿಡಿ ಮಂಡಳಿ ಸದಸ್ಯ ಹಾಗೂ ಸಾಹಿತ್ಯ ಇನ್ಫ್ರಾಟೆಕ್ ವೆಂಚರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬಿ ಭೂದರಿ ಲಕ್ಷ್ಮಿನಾರಾಯಣ ಅವರನ್ನು ಹೈದ್ರಾಬಾದ್ ಸಿಸಿಎಸ್ ಪೊಲೀಸರು ಬಂಧಿಸಿದ್ದಾರೆ. ಉದ್ಘಾಟನೆಯಾಗದ ಯೋಜನೆ ಸಂಬಂಧ ಅವರು 2,500 ಜನರಿಂದ 900 ಕೋಟಿ ಹಣವನ್ನು ಅವರು ಸಂಗ್ರಹಿಸಿ, ಮೋಸ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹಣಕಾಸಿನ ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿ ಸಂಗರೆಡ್ಡಿ ಜಿಲ್ಲೆಯ ಅಮಿನ್ಪುರ್ ಗ್ರಾಮದಲ್ಲಿ ಸಾಹಿತ್ಯ ಸರವನಿ ಎಲೈಟ್ ಪ್ರಾಜೆಕ್ಟ್ ಅನ್ನು ಲಕ್ಷ್ಮಿ ನಾರಾಯಣ ಘೋಷಿಸಿದ್ದರು. 23 ಎಕರೆ ಪ್ರದೇಶದಲ್ಲಿ 38 ಅಂತಸ್ತಿನ ಎರಡು- ಮೂರು ಬೆಡ್ರೂಂ ಅಪಾರ್ಟ್ಮೆಂಟ್ ಕಟ್ಟುವುದಾಗಿ ಹೇಳಿದ್ದರು. ಇದಕ್ಕಾಗಿ ಕಡಿಮೆ ವೆಚ್ಚದಲ್ಲಿ ಉನ್ನತ ದರ್ಜೆ ಫ್ಲಾಟ್ಗಳನ್ನು ನೀಡುವುದಾಗಿ 1,700 ಜನರಿಂದ 539 ಕೋಟಿಯನ್ನು ಸಂಗ್ರಹಿಸಿದ್ದರು ಎನ್ನಲಾಗ್ತಿದೆ.
ಆದರೆ, ಈ ಯೋಜನೆ ನಿರ್ಮಾಣಕ್ಕೆ ಎಚ್ಎಂಡಿಎ ಅವರಿಂದ ಅನುಮತಿ ಪಡೆದಿರಲಿಲ್ಲ. ಆರಂಭದಲ್ಲಿ ಭೂಮಿಯನ್ನು ಪ್ರಾಜೆಕ್ಟ್ಗಾಗಿ ಭೂಮಿ ವಶಕ್ಕೆ ಪಡೆದು, ಅನುಮತಿ ಪಡೆದ ಬಳಿಕ ನಿರ್ಮಾಣಕ್ಕೆ ಸಮಯ ಬೇಕಾಗುತ್ತದೆ ಎಂದಿದ್ದರು. ಮೂರು ವರ್ಷ ಆದರೂ ಈ ಪ್ರಾಜೆಕ್ಟ್ ಪೂರ್ಣಗೊಳ್ಳದ ಹಿನ್ನೆಲೆ ಜನರು ತಮ್ಮ ಬುಕ್ಕಿಂಗ್ ರದ್ದು ಮಾಡಿ, ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಲಕ್ಷ್ಮಿನಾರಾಯಣ 15-18ರಷ್ಟು ಬಡ್ಡಿಗೆ ಹಣ ನೀಡುವುದಾಗಿ ಹಣ ಪಡೆದಿದ್ದಾರೆ. ಬಳಿಕ ಜನರಿಗೆ ನೀಡಿದ ಕೆಲವು ಚೆಕ್ಗಳು ಬೌನ್ಸ್ ಆಗಿದ್ದು, ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲವು ಪ್ರಾಜೆಕ್ಟ್ ಹೆಸರಲ್ಲಿ ಮೋಸ: ಈ ಅಪಾರ್ಟ್ಮೆಂಟ್ ಹೊರತಾಗಿ ಪ್ರಗತಿನಗರ್, ಬೆಂಗಳೂರು, ಕಾಕತೀಯ ಹಿಲ್ಸ್, ಅಯ್ಯಪ್ಪ ಸೊಸಥಟಿ, ಕೊಮಪಲ್ಲಿ, ಸಮೀರ್ ಪೇಟ್ ಸೇರಿದಂತೆ ಹೈದರಾಬಾದ್ ಹೊರ ಪ್ರದೇಶದಲ್ಲಿ ಹಲವು ಒ್ರಾಜೆಕ್ಟ್ ಆರಂಭಿಸುವುದಾಗಿ ಆರೋಪಿ ತಿಳಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ 2,500 ಜನರಿಂದ 900 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ. ಅಮಿನ್ಪುರ ಪ್ರಾಜೆಕ್ಟ್ ಅನ್ನು 2021ರಲ್ಲಿ ಮುಗಿಸಿ ಕೊಡುವುದಾಗಿ ಹೇಳಿ ವಂಚಿಸಿದ ಆರೋಪ ಹಿನ್ನೆಲೆ ನೂರಾರು ಸಂತ್ರಸ್ತರು ಧರಣಿ ಮಾಡಿ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಈ ಪ್ರಕರಣ ಸಂಬಂಧ ಸಿಸಿಎಸ್ ಪೊಲೀಸರು ಲಕ್ಷ್ಮಿನಾರಾಯಣ ಅವರನ್ನು ಕಳೆದ ಆಗಸ್ಟ್ನಲ್ಲಿ ವಿಚಾರಣೆ ಕೂಡ ಮಾಡಿದ್ದರು ಎಂದು ತಿಳಿದುಬಂದಿದೆ.
ಟಿಟಿಡಿ ಮಂಡಳಿಗೆ ರಾಜೀನಾಮೆ: ಲಕ್ಷ್ಮೀನಾರಾಯಣ ಮೇಲೆ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆ ನೈತಿಕ ಹೊಣೆ ಹೊತ್ತು ಶುಕ್ರವಾರ ಟಿಟಿಡಿಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 2021ರಿಂದ ಟಿಟಿಡಿ ಸದಸ್ಯರಾಗಿದ್ದ ಅವರು ರಾಜೀನಾಮೆಯನ್ನು ರಾಜ್ಯ ಸರ್ಕಾರ ಮತ್ತು ಟಿಟಿಡಿಗೆ ರವಾನಿಸಿದ್ದಾರೆ.
ಇದನ್ನೂ ಓದಿ: ತಂದೆಯಿಂದ 50 ಲಕ್ಷ ಹಣ ವಸೂಲಿ ಮಾಡಲು ಅಪಹರಣದ ಕಥೆ ಕಟ್ಟಿದ ಮಗ!