ಚಿಕ್ಕಮಗಳೂರು : ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಓದಿ: ಕದ್ದ ಬೈಕಿನಲ್ಲಿ ಸರಣಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ದೆಹಲಿ ಗ್ಯಾಂಗ್ ಅರೆಸ್ಟ್!
ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಸಮೀಪದ ಸೊಕ್ಕೆ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಕಿರಣ್ ನಾಯ್ಕ (28) ತರೀಕೆರೆಯ ನಾಗೇನಹಳ್ಳಿ ನಿವಾಸಿ, ಬಸವರಾಜ್ ನಾಯ್ಕ (48) ತರೀಕೆರೆಯ ಕೋಡಿಕ್ಯಾಂಪ್ ನಿವಾಸಿ ಮೃತಪಟ್ಟವರು ಎನ್ನಲಾಗಿದೆ.
ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೋರ್ವ ಆಸ್ವತ್ರೆಗೆ ಹೋಗುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಜ್ಜಂಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.