ETV Bharat / crime

ಬೀದರ್: 15 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಲೇಡಿ ತಹಶೀಲ್ದಾರ್ - ಬೀದರ್ ತಾಲೂಕು ತಹಶೀಲ್ದಾರ್​ ಗಂಗಾದೇವಿ

15 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಬೀದರ್ ಡಿಎಸ್​ಪಿ ಹಣಮಂತರಾಯ ನೇತೃತ್ವದ ತಂಡ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್​ನ ತಮ್ಮ ಬಲೆಗೆ ಬೀಳಿಸಿದ್ದಾರೆ.

ACB attack
ಎಸಿಬಿ ದಾಳಿ
author img

By

Published : Jul 28, 2021, 1:48 PM IST

ಬೀದರ್: ಸುಮಾರು 15 ಲಕ್ಷ ರೂ. ನಗದು ಲಂಚ ಪಡೆಯುತ್ತಿದ್ದಾಗ ಬೀದರ್ ತಾಲೂಕು ತಹಶೀಲ್ದಾರ್​ ಗಂಗಾದೇವಿ ರೇಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.

ನಗರದ ಚಿದ್ರಿ ಗ್ರಾಮದ ಸರ್ವೆ ನಂಬರ್ 15 ರಲ್ಲಿ ಭೂಮಿ ಪರಭಾರೆ ಮಾಡಲು ಲೀಲಾಧರ್ ಎಂಬಾತರಿಗೆ 20 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆಯಲ್ಲಿ 15 ಲಕ್ಷ ರೂ. ಮುಂಗಡ ನೀಡಲು ಬಂದಾಗ ತಹಶೀಲ್ದಾರ್ ಗಂಗಾದೇವಿ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಹಶೀಲ್ದಾರ್ ಮನೆ ಮೇಲೆ ಎಸಿಬಿ ದಾಳಿ

ಬೀದರ್ ಡಿಎಸ್​ಪಿ ಹಣಮಂತರಾಯ ಮತ್ತು ಅವರ ತಂಡ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್​ ಅನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಬೀದರ್ ತಾಲೂಕಿನಲ್ಲಿ ವಿವಿಧ ಭ್ರಷ್ಟಾಚಾರ ಪ್ರಕರಣದಲ್ಲಿ ತಹಶೀಲ್ದಾರ್ ಗಂಗಾದೇವಿ ಅವರ ಹೆಸರು ಪ್ರಸ್ತಾಪವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.