ETV Bharat / crime

ಏ.​23ರ ವರೆಗೆ ಸಚಿನ್​ ವಾಜೆ ನ್ಯಾಯಾಂಗ ಬಂಧನಕ್ಕೆ - ಮಾಜಿ ಪೊಲೀಸ್​ ಅಧಿಕಾರಿ ಸಚಿನ್ ವಾಜೆ

ಎನ್​ಐಎ ವಶದಲ್ಲಿರುವ ಆರೋಪಿ ಸಚಿನ್ ವಾಜೆಯನ್ನು ಏ.​23ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಹಾಕಿದೆ.

Sachin Waze
ಸಚಿನ್​ ವಾಜೆ
author img

By

Published : Apr 9, 2021, 4:13 PM IST

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ಮತ್ತು ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತುಗೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ವಶದಲ್ಲಿರುವ ಮಾಜಿ ಪೊಲೀಸ್​ ಅಧಿಕಾರಿ ಸಚಿನ್ ವಾಜೆಯನ್ನು ಏಪ್ರಿಲ್​ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎನ್​ಐಎ ವಿಶೇಷ ಕೋರ್ಟ್​ ಆದೇಶ ನೀಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ. ಮುಂಬೈನ ಮುಖೇಶ್​ ಅಂಬಾನಿಯ ನಿವಾಸ ಆ್ಯಂಟಿಲಿಯಾ ಹೊರಗೆ ಸ್ಫೋಟಕ ಇರಿಸಿದ್ದ ಆರೋಪದಲ್ಲಿ ವಿಚಾರಣೆಗಾಗಿ ಸಚಿನ್ ವಾಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಮತ್ತೊಬ್ಬ ಟಿಎಂಸಿ ಕಾರ್ಯಕರ್ತನ ಹತ್ಯೆ: ಬಿಜೆಪಿಯಿಂದ ಕೃತ್ಯ ಆರೋಪ

ಸಚಿನ್ ವಾಜೆ ಮಾರ್ಚ್​​​ 13 ರಂದು ಬಂಧಿತನಾಗಿದ್ದ. ಇದಕ್ಕೂ ಮೊದಲು ಹೆಚ್ಚಿನ ವಿಚಾರಣೆಗೆ ಎನ್​ಐಎ ಅಧಿಕಾರಿಗಳು ಎನ್ಐಎ ಕೋರ್ಟ್​ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ಏಪ್ರಿಲ್ 7ರವರೆಗೆ ಆರೋಪಿಯನ್ನು ಎನ್​ಐಎ ಕಸ್ಟಡಿಗೆ ನೀಡಿತ್ತು. ಏ.7 ರಂದು ಮತ್ತೆ ವಿಚಾರಣೆ ನಡೆಸಿದ್ದ ಕೋರ್ಟ್​ ಇಂದಿನವರೆಗೂ ಪೊಲೀಸರ ಕಸ್ಟಡಿಗೆ ಒಪ್ಪಿಸಿತ್ತು. ಇಂದಿಗೆ ಎನ್​ಐಎ ಅವಧಿ ಮುಕ್ತಾಯವಾಗಿರುವ ಹಿನ್ನೆಲೆ ಮತ್ತಷ್ಟು ವಿಚಾರಣೆಗಾಗಿ ಕೋರ್ಟ್​ಗೆ ಮನವಿ ಮಾಡಲಾಗಿತ್ತು. ಆದರೆ ಕೋರ್ಟ್​ ಎನ್​​ಐಎ ಮನವಿ ತಿರಸ್ಕರಿಸಿ ಏಪ್ರಿಲ್​ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.