ETV Bharat / crime

ಬೆಳಗಾವಿಯಲ್ಲಿ ಆಸ್ತಿಗಾಗಿ ಸಹೋದರರೊಂದಿಗೆ ಸೇರಿ ಪತ್ನಿ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ - ಬೆಳಗಾವಿ ಕ್ರೈಮ್‌ ಸುದ್ದಿ

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಪತಿಯ ಆಸ್ತಿಯನ್ನು ಕೇಳಿದ ತಪ್ಪಿಗೆ ತಮ್ಮನ ಪತ್ನಿಯನ್ನೇ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಪತಿ ರೆಹಮಾನ್ ತಾಸವಾಲೆ ಮತ್ತು ಭಾಮೈದ ಇಬ್ರಾಹಿಂನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಬಲೆ ಬೀಸಲಾಗಿದೆ.

A man murdered his wife for property in Belagavi district
ಬೆಳಗಾವಿಯಲ್ಲಿ ಆಸ್ತಿಗಾಗಿ ಸಹೋದರರೊಂದಿಗೆ ಸೇರಿ ಪತ್ನಿ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
author img

By

Published : Aug 14, 2021, 2:55 AM IST

ಬೆಳಗಾವಿ: ಸಹೋದರರ ಜೊತೆಗೂಡಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಪತಿ ಹಾಗೂ ಆತನ‌ ಓರ್ವ ಸಹೋದರನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ನಾಲ್ವರು ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ. ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಆರೋಪಿ ಪತಿ ರೆಹಮಾನ್ ತಾಸವಾಲೆ ಮತ್ತು ಭಾಮೈದ ಇಬ್ರಾಹಿಂ ಬಂಧಿತ ಆರೋಪಿಗಳು.‌ ನಾಪತ್ತೆಯಾಗಿರುವ ಯೂನೂಸ್ ಮತ್ತು ಆತನ ತಂದೆ ಗೊರೆಸಾಬ್ ಪತ್ತೆಗೆ ಒಂದು ತಂಡ ರಚಿಸಿದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ
ಖಾನಾಪುರ ತಾಲೂಕಿನ ಗಷ್ಟೋಳಿ ಗ್ರಾಮದ ನಿವಾಸಿ ಕೊಲೆಯಾದ ರೇಷ್ಮಾ ತಾಸವಾಲೆ (37) ಕಳೆದ 22 ವರ್ಷದ ಹಿಂದೆ ಖಾನಾಪುರ ಮೂಲದ ರೆಹಮಾನ್ ಎಂಬುವವರನ್ನು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ಮಾಡಿಕೊಂಡಿದ್ದರು. ಇವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾಳೆ. ಜೀವನ ನಿರ್ವಹಣೆಗೆ ರೆಹಮಾನ್ ಅದೇ ಗ್ರಾಮದಲ್ಲಿ ಸೈಕಲ್ ಪಂಚರ್ ಶಾಪ್ ಇಟ್ಟುಕೊಂಡಿದ್ರೇ ಈಕೆ ಮನೆ ಕೆಲಸ ಮಾಡಿಕೊಂಡಿದ್ದಳು. ರೇಷ್ಮಾ ಪತಿ ರೆಹಮಾನ್‌ಗೆ ಮೂರು ಜನ ಅಣ್ಣಂದರಿದ್ದು ಎಲ್ಲರೂ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ.

ಕಳೆದೆರಡು ವರ್ಷದ ಹಿಂದೆ ಆಸ್ತಿಪಾಲು ಮಾಡುವ ಸಂದರ್ಭದಲ್ಲಿ ರೆಹಮಾನ್‌ಗೆ ಆಸ್ತಿಯಲ್ಲಿ ಪಾಲು ಕೊಟ್ಟಿರಲಿಲ್ಲ. ಅಂದು ತಾಯಿ ಹೆಸರಿಗೆ ಆಸ್ತಿ ಇರಲಿ ಆಕೆ ಸತ್ತ ಮೇಲೆ ನಿನಗೆ ಆಸ್ತಿ ಕೊಡ್ತೀವಿ ಅಂತಾ ನಂಬಿಸಿದ್ರಂತೆ. ಅಂದು ಅಣ್ಣಂದಿರ ಮಾತನ್ನು ನಂಬಿ ಸುಮ್ಮನಾಗಿದ್ದನು. ಆದರೆ ಇದು ರೆಹಮಾನ್ ಪತ್ನಿ ರೇಷ್ಮಾಗೆ ಸಹಿಸಿಕೊಳ್ಳಲು ಆಗಲಿಲ್ಲ.

ಮದುವೆಯಾದ ಕೆಲ ದಿನಗಳಿಂದಲೂ ಕುಡುಕ ಗಂಡನ ಕಿರುಕುಳ ಸಹಿಸಿಕೊಂಡಿದ್ದ ರೇಷ್ಮಾ ಆಸ್ತಿ ಹಂಚಿಕೆಯಾದ ಬಳಿಕ ತನ್ನ ಗಂಡನಿಗೂ ಆಸ್ತಿ ಭಾಗ ಕೊಡಿ ಎಂದು ಜಗಳ ಮಾಡುತ್ತಿದ್ದಳು. ಆಸ್ತಿಗಾಗಿ ಪತಿಯ ಸಹೋದರರ ಜೊತೆಗೆ ರೇಷ್ಮಾ ಜಗಳ ಆಡಿದ್ದನ್ನ ಕೇಳಿ ಅಂದು ರೇಷ್ಮಾ ಮೇಲೆ ಪತಿ ಹಲ್ಲೆ ಮಾಡಿದ್ದನಂತೆ. ಇದಾದ ಬಳಿಕ ರೆಹಮಾನ್‌ ಅಣ್ಣಂದಿರು ಕೂಡ ಹಲವು ಬಾರಿ ಆಕೆಗೆ ಹೊಡೆದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಇದ್ಯಾವದಕ್ಕೂ ಅಂಜದ ರೇಷ್ಮಾ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸತ್ತರೂ ಆಸ್ತಿಯನ್ನ ಬಿಡುವುದಿಲ್ಲ ಎಂಬ ಹಠಕ್ಕೆ ಬಿದ್ದಿದ್ದಾಳೆ. ಆಸ್ತಿ ಸಂಬಂಧಿಸಿದಂತೆ ಗ್ರಾಮದ ಹಿರಿಯರನ್ನು ಸೇರಿಸಿ ತನ್ನ ಪತಿ ಕುಡುಕ ಇದ್ದಾನೆ. ನಮಗೆ ಆಸ್ತಿ ಹಂಚಿಕೆ ಮಾಡಿಕೊಡಿ ಎಂದು‌ ಮನವಿ ಮಾಡಿಕೊಂಡಿದ್ದಾಳೆ. ಆದ್ರೆ, ರೇಷ್ಮಾ ಏನೇ ಮಾಡಿದರೂ ಅವಳಿಗೆ ಕಿರಿಕ್ ಮಾಡ್ತಿದ್ದ ಪತಿಯ ಸಹೋದರರು ಕಾಲು‌ ಕೆರೆದು ಜಗಳಕ್ಕೆ ನಿಲ್ಲುತ್ತಿದ್ದರು. ಇದಕ್ಕೆ ಕುಡುಕ ಗಂಡ ಕೂಡ ಸಾಥ್ ಕೊಟ್ಟಿದ್ದಾನೆ.

ಇದನ್ನೂ ಓದಿ: ಸಹೋದರರ ಜೊತೆಗೂಡಿ ಪತ್ನಿಯನ್ನೇ ಹತ್ಯೆಗೈದ ಪತಿ

ಗೂಂಡಾಗಿರಿ ಮಾಡಿಕೊಂಡು ಓಡಾಡ್ತಿದ್ದ ಸಹೋದರರು..!
ಗ್ರಾಮಸ್ಥರು ಹೇಳುವ ಪ್ರಕಾರ, ಊರಲ್ಲೂ ಗೂಂಡಾಗಿರಿ ಮಾಡ್ತಾ ಓಡಾಡ್ತಿದ್ದ ಇವರನ್ನು ಗ್ರಾಮದಲ್ಲಿ ಹಿಡಿಯೋದೆ ಕಷ್ಟವಾಗಿತಂತೆ. ಕಳೆದ ಹತ್ತು ವರ್ಷದ ಹಿಂದೆ ದೊಡ್ಡಣ್ಣ ಗೊರೆಸಾಬ್ ತನ್ನ ಹೆಂಡತಿ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ಆಕೆಗೆ ಬೆಂಕಿ ಹಚ್ಚಿ ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಳು ಅಂತಾ ಬಿಂಬಿಸಿದ್ದಾರಂತೆ. ಆದ್ರೆ, ಇದ್ಯಾವದನ್ನು ತಲೆಗೆ ಹಾಕಿಕೊಳ್ಳದ ರೇಷ್ಮಾ ಕುಡುಕ ಗಂಡ, ಮತ್ತೆ ಅವರ ಕುಟುಂಬಸ್ಥರ ಕಿರಿಕಿರಿಗೆ ಸೋತು ಹೋಗಿದ್ದು, ಮಕ್ಕಳಿಗಾಗಿ ಎಲ್ಲರ ವಿರೋಧ ಕಟ್ಟಿಕೊಂಡು ತನ್ನ ಮೂರು ಮಕ್ಕಳ ಜೊತೆಗೂಡಿ ಕೋರ್ಟ್‌ನಲ್ಲಿ ದಾವೆ ಹೂಡಲು ಮುಂದಾಗುತ್ತಾಳೆ.

ಯಾವಾಗಾ ಕೋರ್ಟ್‌ಗೆ ಹೋಗಲು ರೇಷ್ಮಾ ಪ್ಲ್ಯಾನ್ ಮಾಡಿದ್ದಾಳೆ ಅನ್ನೋದು ರೆಹಮಾನ್ ಮತ್ತು ಆತನ ಅಣ್ಣಂದಿರುಗಳಿಗೆ ಗೊತ್ತಾಗುತ್ತೋ ಆಗ ಆಕೆಯನ್ನ ಬಿಡಬಾರದು ಅನ್ನುವ ನಿರ್ಧಾರಕ್ಕೆ ಬಂದು ಬಿಡ್ತಾರೆ. ತಾವಷ್ಟೇ ಆಕೆಯನ್ನ ಹತ್ಯೆ ಮಾಡಬಾರದು ಅಂದುಕೊಂಡ ಗೊರೆಸಾಬ್, ಇಬ್ರಾಹಿಂ ತಮ್ಮ ರೆಹಮಾನ್‌ಗೆ ಚೆನ್ನಾಗಿ ಕುಡಿಸಿ ನಿನ್ನ ಹೆಂಡತಿ ಸರಿಯಿಲ್ಲ ಹಾಗೇ ಹೀಗೆ ಅಂತಾ ಆಕೆಯ ಬಗ್ಗೆ ಕೆಟ್ಟದಾಗಿ ಹೇಳ್ತಾರೆ. ಇದರಿಂದ ಆಕ್ರೋಶಗೊಂಡ ರೆಹಮಾನ್ ಆಕೆಯನ್ನು ಬಿಡೋದೇ ಇಲ್ಲ ಅನ್ನೋವಾಗಾ ನೀನೆನೂ ಮಾಡಬೇಡಾ ನಾವೇ ಆಕೆಯನ್ನ ಮುಗಿಸುತ್ತೇವೆ. ನೀನು ನಮಗೆ ಸಾಥ್ ಕೊಡು ಅಂತಾ ಆತನಿಗೆ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ತಲೆ ಅಲ್ಲಾಡಿಸಿದ್ದ ರೆಹಮಾನ್ ಅಣ್ಣಂದಿರು ಹೇಳಿದಂತೆ ಕೇಳಲು ಶುರು ಮಾಡ್ತಾನೆ.

ಇದೆಲ್ಲದರ ನಡುವೆ ಆ.11ರಂದು ರೆಹಮಾನ್ ಅಣ್ಣಂದಿರ ಮಾತು ಕೇಳಿ ಮನೆಯಲ್ಲಿದ್ದ ಮಕ್ಕಳನ್ನ ಕರೆದುಕೊಂಡು ಶಾಲೆಗೆ ಆಧಾರ್ ಕಾರ್ಡ್ ಮಾಡಿಸಲು ಹೋಗುವ ಪ್ಲ್ಯಾನ್ ಮಾಡ್ತಾನೆ. ಮಕ್ಕಳು ಆಧಾರ್ ಕಾರ್ಡ್ ಮಾಡಿಸಲು ಹೋಗುವುದನ್ನ ಕಂಡ ರೇಷ್ಮಾ ತಾನೂ ಕೂಡ ಪಡಿತರ ಶಾಪ್‌ಗೆ ಹೋಗಿ ಹೆಬ್ಬಟ್ಟು ಕೊಡಲು ಮುಂದಾಗ್ತಾಳೆ. ಅದರಂತೆ ಹೆಬ್ಬಟ್ಟು ಕೊಡಲು ಹೋಗ್ತಾಳೆ‌, ಇದನ್ನ ಹೊಂಚು ಹಾಕಿ ಕುಳಿತಿದ್ದ ಯೂನೂಸ್ ಮತ್ತು ಆತನ ಚಿಕ್ಕಪ್ಪ ಇಬ್ರಾಹಿಂ ರೇಷ್ಮಾ ವಾಸ ಮಾಡುತ್ತಿದ್ದ ಮನೆಯ ಕೊಠಡಿ ಹೊಕ್ಕಿದ್ದರು. ರೇಷ್ಮಾ ಒಬ್ಬಳೇ ಮನೆಗೆ ಬಂದು ಬಟ್ಟೆ ಬದಲಿಸಿದ್ರೇ ಆಯ್ತು ಅಂತಾ ರೂಮ್‌ಗೆ ಹೋಗ್ತಿದ್ದಂತೆ ಇಬ್ಬರು ಆಕೆಯ ಮೇಲೆ ಹಲ್ಲೆ ಮಾಡ್ತಾರೆ‌. ರಾಡ್ ಹಾಗೂ ದೊಣ್ಣೆಯಿಂದ ತಲೆ ಭಾಗಕ್ಕೆ ಹೊಡದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.

ಹತ್ಯೆ ಮಾಡಿ ರೂಮ್‌ನ ಒಳಗಿಂದ ಲಾಕ್ ಮಾಡಿ ಅದೇ ರೂಮ್‌ನ ಇನ್ನೊಂದು ಬಾಗಿಲಿನಿಂದ ಎಸ್ಕೇಪ್ ಆಗಿದ್ದರು. ಇತ್ತ ಸುದ್ದಿ ತಿಳಿದು ಸ್ಥಳಕ್ಕೆ ಬಂದ ನಂದಗಡ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ‌ ಕೈಗೊಂಡು ಎಸ್ಕೇಪ್ ಆಗಿದ್ದ ಪತಿ ರೆಹಮಾನ್ ಮತ್ತು ಭಾಮೈದ ಇಬ್ರಾಹಿಂನನ್ನು ಬಂಧಿಸಿದ್ದಾರೆ. ‌ನಾಪತ್ತೆಯಾದ ಯೂನೂಸ್ ಮತ್ತು ಆತನ ತಂದೆ ಗೊರೆಸಾಬ್ ಪತ್ತೆಗೆ ಒಂದು ತಂಡ ರಚನೆ ಮಾಡಿ ಬಲೆ ಬೀಸಿದ್ದಾರೆ. ಕೊಲೆ‌ ಮಾಡಿದರ ಕುರಿತು ಅರೆಸ್ಟ್ ಆದ ಆರೋಪಿಗಳಿಬ್ಬರೂ ಬಾಯಿ ಬಿಟ್ಟಿದ್ದು ಅವರ ಹೇಳಿಕೆ ಅನುಸಾರ ಇನ್ನಿಬ್ಬರ ಹುಡುಕಾಟವನ್ನ ಪೊಲೀಸರು ನಡೆಸುತ್ತಿದ್ದಾರೆ. ಅಣ್ತಮ್ಮಂದಿರ ಮಾತು ಕೇಳಿ ಹೆಂಡತಿಯನ್ನ ಕೊಂದ ಪಾಪಿ ಗಂಡ ಜೈಲಿಗೆ ಹೋದ್ರೇ ಇತ್ತ ಮೂರು ಮಕ್ಕಳು ಇದೀಗ ತಾಯಿನ್ನ ಕಳೆದುಕೊಂಡು ಅನಾಥವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.