ಹೈದರಾಬಾದ್(ತೆಲಂಗಾಣ): ಮುತ್ತಿನ ನಗರಿಯಲ್ಲಿ ಅಮಾನವೀಯ ಮತ್ತು ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ಇಲ್ಲಿನ ಚಂದ್ರಾಯನಗುಟ್ಟ ಪ್ರದೇಶದ ಛತ್ರಿನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗಾಂಜಾ ಮತ್ತಲ್ಲಿ ದುಷ್ಕೃತ್ಯ ನಡೆಸಿದ ಕಾಮಾಂಧರು.. ಗಾಂಜಾ ಗುಂಗಿನಲ್ಲಿ 15 ವರ್ಷ ವಯಸ್ಸಿನ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಬಳಿಕ ಅತ್ಯಾಚಾರ ಎಸಗಿದ್ದಾರೆ.
ಫೆ. 4ರಂದು ಔಷಧಿ ತರಲು ಹೊರ ಹೋಗಿದ್ದ ಬಾಲಕಿ.. ಕಳೆದ ನಾಲ್ಕು ದಿನಗಳ ಹಿಂದೆ ಕಂಡಿಕಾಲ ಬೊಯಾಗುಡಾ ಏರಿಯಾದಲ್ಲಿ ಬಾಲಕಿಯು ಮೆಡಿಕಲ್ ಶಾಪ್ಗೆ ಔಷಧಿ ತರಲು ಹೊರ ಹೋಗಿದ್ದಳು. ಈ ವೇಳೆ ಓರ್ವ ಯುವಕ ಕಡಿಮೆ ಬೆಲೆಗೆ ಔಷಧಿ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಆ ಮನೆಯಲ್ಲಿ ಅದಾಗಲೇ ಗಾಂಜಾ ಮತ್ತಿನಲ್ಲಿದ್ದ ಇತರೆ ಮೂವರು ಕಾಮುಕರು ಠಿಕಾಣಿ ಹೂಡಿದ್ದರು.
ಮೊದಲು ಹುಕ್ಕಾ ಸೇದುವಂತೆ ಒತ್ತಾಯ.. ಯುವಕನು ಮನೆಯೊಳಗೆ ಬಾಲಕಿಯನ್ನು ಕರೆದೊಯ್ದ ನಂತರ ಅಲ್ಲಿದ್ದವರೆಲ್ಲ ಸೇರಿ ಮೊದಲು ಬಾಕಿಗೆ ಹುಕ್ಕಾ ಸೇದುವಂತೆ ಒತ್ತಾಯಿಸಿದ್ದಾರೆ. ಬಳಿಕ ಕೂಲ್ ಡ್ರಿಂಕ್ನಲ್ಲಿ ಮದ್ಯ ಬೆರೆಸಿ ಅದನ್ನು ಕುಡಿಯುವಂತೆ ಬೆದರಿಸಿದ್ದಾರೆ. ಇವರ ದುರ್ವರ್ತನೆಯಿಂದ ಬೆಚ್ಚಿಬಿದ್ದ ಬಾಲಕಿ ಕಿರುಚಿಕೊಳ್ಳಲು ಆರಂಭಿಸಿದ್ದಾಳೆ.
ಮ್ಯೂಸಿಕ್ ಶಬ್ದವನ್ನು ಹೆಚ್ಚಿಸಿ ಕ್ರೌರ್ಯ.. ಬಾಲಕಿ ಕಿರುಚಿಕೊಳ್ಳುವ ಶಬ್ದ ಹೊರಗಡೆ ಯಾರ ಗಮನಕ್ಕೂ ಬಾರದಿರಲಿ ಎಂದು ಮ್ಯೂಸಿಕ್ ಸೌಂಡ್ಅನ್ನು ಹೆಚ್ಚಿಸಿದ ಕಾಮುಕರು ಬಳಿಕ ಬಾಲಕಿಯ ಮೇಲೆ ಎರಗಿದ್ದಾರೆ. ಎಲ್ಲರೂ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ತಪ್ಪಿಸಿಕೊಂಡು ಬಂದ ಬಾಲಕಿ.. ಕಾಮುಕರ ಕ್ರೌರ್ಯಕ್ಕೆ ನಲುಗಿರುವ ಬಾಲಕಿ ಹೇಗೋ ಆ ಸ್ಥಳದಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ತಕ್ಷಣ ಮನೆಗೆ ಬಂದ ಬಾಲಕಿ ಅಲ್ಲಿ ತನ್ನ ಮೇಲೆ ನಡೆದ ಕ್ರೌರ್ಯದ ಬಗ್ಗೆ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಮಗಳ ಮೇಲೆ ನಡೆದ ದುಷ್ಕೃತ್ಯದ ಬಗ್ಗೆ ತಿಳಿದ ಅಮ್ಮ ಒಂದು ಕ್ಷಣ ದಿಕ್ಕು ತೋಚದಂತಾಗಿದ್ದಾಳೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಪೊಲೀಸರಿಂದ ವಿಶೇಷ ತಂಡ ರಚನೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ವಿಶೇಷ ತನಿಖಾ ತಂಡ ರಚನೆ ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಆಂಧ್ರಪ್ರದೇಶದ ಗುಂಟೂರಿನಲ್ಲಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಬಗ್ಗೆ ಡಿಸಿಪಿ ಸಾಯಿ ಚೈತನ್ಯಾ ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಮೂವರು ಕಾಮುಕರು ಸೇರಿದಂತೆ ಇನ್ನಿಬ್ಬರು ಸಹಚರರನ್ನು ಬಂಧಿಸಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಡಿಸಿಪಿ ಸಾಯಿ ಚೈತನಾ ಪ್ರಕರಣದ ಕುರಿತು ವಿವರಿಸಿದ್ದಾರೆ.
ಬೆಂಗಳೂರಲ್ಲಿ ಪಾರ್ಟಿ ನೆಪದಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನ.. ಇತ್ತೀಚೆಗೆ ಬೆಂಗಳೂರಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತೆಯರನ್ನು ರೂಮಿಗೆ ಕರೆದು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ತಮ್ಮ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ನೊಂದ ಯುವತಿಯರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ವಿವೇಕ ನಗರ ಠಾಣಾ ಪೊಲೀಸರು ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ.. ಪಾರ್ಟಿ ನೆಪದಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರ ಯತ್ನ; ಬೆಂಗಳೂರಲ್ಲಿ ಆರೋಪಿಗಳ ಬಂಧನ