ETV Bharat / crime

ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಗ್ಯಾಂಗ್​ಸ್ಟರ್​ ಪಪಲಾ ಗುರ್ಜಾರ್ ಬಂಧನ - ರಾಜಸ್ಥಾನ ಪೊಲೀಸರು

ಒಂದೂವರೆ ವರ್ಷದ ಹಿಂದೆ ರಾಜಸ್ಥಾನ ಅಲ್ವಾರಾದ ಬಹ್ರೋರ್​​ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಗ್ಯಾಂಗ್​ಸ್ಟರ್​ ವಿಕ್ರಮ್ ಸಿಂಗ್ ಅಲಿಯಾಸ್ ಪಪಲಾ ಗುರ್ಜಾರ್​ನನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

Alwar news
ಗ್ಯಾಂಗ್​ಸ್ಟರ್​ ಪಪಲಾ ಗುರ್ಜಾರ್ ಬಂಧನ
author img

By

Published : Jan 29, 2021, 9:56 AM IST

ಅಲ್ವಾರ್​ (ರಾಜಸ್ಥಾನ): ಮೋಸ್ಟ್​ ವಾಂಟೆಡ್​ ಗ್ಯಾಂಗ್​ಸ್ಟರ್​ ವಿಕ್ರಮ್ ಸಿಂಗ್ ಅಲಿಯಾಸ್ ಪಪಲಾ ಗುರ್ಜಾರ್​ ಕೊನೆಗೂ ರಾಜಸ್ಥಾನ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಒಂದೂವರೆ ವರ್ಷದ ಹಿಂದೆ ಅಲ್ವಾರಾದ ಬಹ್ರೋರ್​​ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಪಪಲಾ ಗುರ್ಜಾರ್​ನನ್ನು ನಿನ್ನೆ ತಡರಾತ್ರಿ ಬಂಧಿಸಿರುವ ಜೈಪುರ ಪೊಲೀಸರು, ​ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಗುರ್ಜಾರ್ ಜೊತೆಗಿದ್ದ ಆತನ ಗೆಳತಿಯನ್ನೂ ಅರೆಸ್ಟ್ ಮಾಡಿದ್ದಾರೆ.

ಗ್ಯಾಂಗ್​ಸ್ಟರ್​ ಪಪಲಾ ಗುರ್ಜಾರ್ ಬಂಧನ

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಗುರ್ಜಾರ್​ ಅಡಗಿಕೊಂಡಿರುವ ಮಾಹಿತಿ ಮೇರೆಗೆ ಕಳೆದೊಂದು ವಾರದಿಂದ ಎಸ್​​ಪಿ ಸಿದ್ದಾರ್ಥ ಶರ್ಮಾ ನೇತೃತ್ವದ ತಂಡ ಕೊಲ್ಲಾಪುರದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಜಿಮ್​ ಮಾಲೀಕರು, ವಲಸೆ ಕಾರ್ಮಿಕರು, ಢಾಬಾ ಮಾಲೀಕರ ಬಳಿ ಮಾಹಿತಿ ಸಂಗ್ರಹಿಸಿ ಹಾಗೂ ಅಪರಾಧ ಚಟುವಟಿಕೆಗಳು ನಡೆಯುವ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೊನೆಗೂ ಗುರ್ಜಾರ್​ ಅಡಗಿರುವ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು... ಇಬ್ಬರು ಸಜೀವ ದಹನ!

2019ರ ಸೆಪ್ಟೆಂಬರ್​ನಲ್ಲಿ ಎಕೆ - 47 ಗನ್​ಗಳೊಂದಿಗೆ ಬಹ್ರೋರ್ ಠಾಣೆಗೆ ನುಗ್ಗಿದ್ದ ಆತನ ಸಹಚಚರು ಪೊಲೀಸ್​ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಗುರ್ಜಾರ್ ತಪ್ಪಿಸಿಕೊಳ್ಳಲು ಬೆಂಬಲಿಸಿದ್ದರು. ಈವರೆಗೆ ಕೃತ್ಯ ಎಸಗಿದ್ದ 10 ಮಂದಿಯನ್ನು ಬಂಧಿಸಲಾಗಿತ್ತು. ಪಪಲಾ ಗುರ್ಜಾರ್​ನನ್ನು ಹುಡುಕಿಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಜಸ್ಥಾನ ಪೊಲೀಸರು ಘೋಷಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.