ETV Bharat / crime

ಅಮೃತಸರ ಪೊಲೀಸರ ಭರ್ಜರಿ ಕಾರ್ಯಾಚರಣೆ: 5.2 ಕೆಜಿ ಹೆರಾಯಿನ್​​​, ಎಕೆ-47 ರೈಫಲ್​ ವಶಕ್ಕೆ

ಪಂಜಾಬ್​ನ ಅಮೃತಸರದಲ್ಲಿ ಪೊಲೀಸರು 5.2 ಕೆಜಿ ಹೆರಾಯಿನ್, ಒಂದು ಎಕೆ -47 ರೈಫಲ್, ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

5.2-kg heroin, AK-47 rifle seized in Punjab's Amritsar
ಅಮೃತಸರದಲ್ಲಿ 5.2 ಕೆಜಿ ಡ್ರಗ್​, ಎಕೆ-47 ರೈಫಲ್​ ವಶಕ್ಕೆ
author img

By

Published : Jan 21, 2021, 11:23 AM IST

ಅಮೃತಸರ (ಪಂಜಾಬ್​): ಅಮೃತಸರದ ಘರೀಂಡಾ ಪ್ರದೇಶದಲ್ಲಿ 5.2 ಕೆಜಿ ಹೆರಾಯಿನ್, ಒಂದು ಎಕೆ -47 ರೈಫಲ್ ಮತ್ತು ಕೆಲವು ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೃತಸರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಾಹಿಯಾ ಅವರು, ಹೆರಾಯಿನ್, ಎಕೆ -47 ರೈಫಲ್ ಜೊತೆಗೆ ಏಳು ಜೀವಂತ ಗುಂಡುಗಳು ಹಾಗೂ ಒಂದು ಮ್ಯಾಗಜಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೇಪಾಳದಲ್ಲಿ ಪೊಲೀಸ್, ಕರ್ನಾಟಕದಲ್ಲಿ ಕಳ್ಳ!

ಈ ಸಂಬಂಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರೆಸಿರುವುದಾಗಿ ಧ್ರುವ್ ದಾಹಿಯಾ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.