ETV Bharat / crime

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸಾವು - ಟ್ರಕ್​ ಹಾಗೂ ಟಾಟಾ ಮ್ಯಾಜಿಕ್​ ಮಿನಿವ್ಯಾನ್​ ನಡುವೆ ಡಿಕ್ಕಿ

ಉತ್ತರ ಪ್ರದೇಶದ ಅಜಮ್‌ಗಡ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

azamgarh
ಅಜಮ್‌ಗಡ್
author img

By

Published : Feb 14, 2021, 3:08 PM IST

ಅಜಮ್‌ಗಡ್​​ (ಉತ್ತರ ಪ್ರದೇಶ): ಟ್ರಕ್​ ಹಾಗೂ ಟಾಟಾ ಮ್ಯಾಜಿಕ್​ ಮಿನಿ ವ್ಯಾನ್​ ನಡುವೆ ಡಿಕ್ಕಿಯಾಗಿ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಜಮ್‌ಗಡ್​ನಲ್ಲಿ ನಡೆದಿದೆ.

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸಾವು

ಗೋರಕ್​ಪುರದಿಂದ ​​ಅಜಮ್‌ಗಡ್​ಗೆ ಕೆಲಸಕ್ಕೆ ಮಿನಿ ವ್ಯಾನ್​ನಲ್ಲಿ 12 ಮಂದಿ ತೆರಳುತ್ತಿದ್ದರು. ಈ ವೇಳೆ ಮರಳು ತುಂಬಿದ್ದ ಟ್ರಕ್​ ಗುದ್ದಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಕರ್ನೂಲ್​ನಲ್ಲಿ ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಒಂದು ಮಗು ಸೇರಿ 14 ಜನ ದುರ್ಮರಣ

ಗಾಯಾಳುಗಳನ್ನು ಅಜಮ್‌ಗಡ್​​ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.