ನವದೆಹಲಿ: ಪೆರೋಲ್ ಮೇಲೆ ಬಿಡುಗಡೆಯಾದ ದೆಹಲಿಯ ತಿಹಾರ್ ಜೈಲಿನ 3,400 ಕೈದಿಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಕೊರೊನಾ ಸಾಂಕ್ರಾಮಿಕದ ವೇಳೆ ಜೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದೊಕೊಳ್ಳಲು ಕಷ್ಟಕರವಾಗಿತ್ತು. ಹೀಗಾಗಿ ಜಾಮೀನು ಮತ್ತು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಆಡಳಿತ ಮನವಿ ಮಾಡಿದ್ದು, ಇದಕ್ಕೆ ದೆಹಲಿ ಸರ್ಕಾರ ಹಾಗೂ ನ್ಯಾಯಾಲಯ ಸಮ್ಮತಿಸಿತ್ತು.
ಇದನ್ನೂ ಓದಿ: ಮಗಳ ಮೇಲೆ ಒಬ್ಬ ಅತ್ಯಾಚಾರ ಎಸಗಿದ್ದಕ್ಕೆ ಬಿತ್ತು 6 ಹೆಣ; ಇಲ್ಲಿ ಕಂದಮ್ಮಗಳು ಮಾಡಿದ ತಪ್ಪೇನು?
ಸುಮಾರು 6,700 ಕೈದಿಗಳಿಗಳನ್ನು ಜಾಮೀನು ಮತ್ತು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಇವರಿಗೆ ಫೆಬ್ರವರಿ ಮಾರ್ಚ್ ನಡುವೆ ಶರಣಾಗಲು ಸೂಚಿಸಲಾಗಿತ್ತು. ಆದರೆ ಇದೀಗ ಕೇವಲ 2,200 ಕೈದಿಗಳು ಮಾತ್ರ ಬಂದು ಶರಣಾಗಿದ್ದಾರೆ. ಇನ್ನೂ ಕೆಲವರು ಶರಣಾಗಲಿದ್ದಾರೆ. ಆದರೆ, 3,400 ಮಂದಿ ಕಾಣೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮತ್ತೆ ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.