ಪಶ್ಚಿಮ ಮೇದಿನಿಪುರ (ಪಶ್ಚಿಮ ಬಂಗಾಳ): ರೈಲು ಅಪಘಾತದಲ್ಲಿ ಮೂವರು ಗ್ಯಾಂಗ್ಮೆನ್ (ರೈಲ್ವೆ ಕಾರ್ಮಿಕರು) ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ದುವಾ ಬಲಿಚಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ದುವಾ ಬಲಿಚಕ್ ನಿಲ್ದಾಣದ ರೈಲ್ವೆ ಮಾರ್ಗದಲ್ಲಿ ಕೆಲಸ ಮಾಡುತ್ತಿರುವ ವೇಳೆ ಖರಗ್‌ಪುರದತ್ತ ಸಾಗುತ್ತಿದ್ದ ಹೌರಾ - ಸಿಕಂದ್ರಬಾದ್ ವಿಶೇಷ ರೈಲು ನಾಲ್ವರು ಗ್ಯಾಂಗ್ಮೆನ್ಗೆ ಗುದ್ದಿಗೆ. ಇವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ರೈಲ್ವೆ ಕಾರ್ಮಿಕ ಗಾಯಗೊಂಡಿದ್ದಾರೆ. ಅವರನ್ನು ಖರಗ್‌ಪುರ ರೈಲ್ವೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಪೊಲೀಸರ ಭರ್ಜರಿ ಬೇಟೆ: 10 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ
ಪ್ರಕರಣದ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ನೇಯ ರೈಲ್ವೆ ಸಿಪಿಆರ್‌ಒ ಸಂಜಯ್ ಘೋಷ್ ತಿಳಿಸಿದ್ದಾರೆ.