ETV Bharat / crime

ದೆಹಲಿ: ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ - ದೆಹಲಿ ಕ್ರೈಮ್‌ ನ್ಯೂಸ್‌

ಎಷ್ಟೇ ಕಾನೂನುಗಳು ಜಾರಿಗೆ ಬಂದರೂ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಿಲ್ಲುತ್ತಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ.

22 year old woman gang raped in moving car in delhi
ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ; ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..!
author img

By

Published : Aug 19, 2021, 12:06 PM IST

ನವದೆಹಲಿ: ದೇಶದ ರಾಜಧಾನಿಯಲ್ಲಿ ಕಾಮುಕರು ಅಮಾನವೀಯ ಕೃತ್ಯ ಎಸಗಿದ್ದಾರೆ. ಇಬ್ಬರು ದುರುಳರು ಚಲಿಸುತ್ತಿದ್ದ ಕಾರಿನಲ್ಲಿ 22 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಕೆಲಸ ಕೊಡುವುದಾಗಿ ಹೇಳಿ ಕಾರೊಳಗೆ ಹತ್ತಿಸಿಕೊಂಡ ಆರೋಪಿಗಲು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ದುಷ್ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಸಂತ್ರಸ್ತೆ ತನ್ನ ಪತಿಯೊಂದಿಗೆ ಗಾಜಿಯಾಬಾದ್ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರಿಗೆ ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ಫೋನ್‌ ಕರೆ ಬಂದಿತ್ತು. ತನ್ನ ಹೆಸರು ರೋಹಿತ್ ಎಂದು ಹೇಳಿದ ಆತ ಕೆಲಸದ ಬಗ್ಗೆ ಮಾಹಿತಿ ಕೇಳಿದ್ದಾನೆ. ಹೀಗೆ ಮಾತನಾಡುತ್ತಾ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಆಗಸ್ಟ್‌ 16 ರಂದು ಆತನನ್ನು ಭೇಟಿ ಮಾಡಲು ಮಹಿಳೆ ಹೋಗಿದ್ದಾಳೆ.

ಆರೋಪಿ ರೋಹಿತ್‌ ಮಹಿಳೆ ಭೇಟಿಗಾಗಿ ಗಾಜಿಯಾಬಾದ್‌ನ ಲಾಲ್ ಕೌನ್ ಪ್ರದೇಶಕ್ಕೆ ಬಂದವನು ಅಲ್ಲಿಂದ ನೇರವಾಗಿ ದೆಹಲಿಗೆ ಆಕೆಯನ್ನು ಕರೆ ತಂದಿದ್ದಾನೆ. ಆತನೊಂದಿಗೆ ಮತ್ತೆೋರ್ವ ವ್ಯಕ್ತಿಯೂ ಇದ್ದು, ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ಬಗ್ಗೆ ಯಾರಿಗಾದ್ರೂ ಬಾಯ್ಬಿಟ್ರೆ ಹತ್ಯೆ ಮಾಡುವ ಬೆದರಿಕೆ ಹಾಕಿದ ಆರೋಪಿಗಳು ಬಳಿಕ ಶಾಸ್ತ್ರಿ ಪಾರ್ಕ್‌ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬಳಿಕ ಮಹಿಳಾ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಂತ್ರಸ್ತೆ ಸಹಾಯ ಕೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.