ETV Bharat / city

ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ಭಕ್ತರಿಗೆ ಕಾದಿತ್ತು ಈ ಅಚ್ಚರಿ!

ನಾಡಿನಾದ್ಯಂತ ನಾಗರಪಂಚಮಿಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ಆದ್ರೆ, ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ನಾಗರ ಕಲ್ಲಿಗೆ ಪೂಜೆ ಮಾಡಲು ಬರುವಂತಹ ಭಕ್ತರಿಗೆ ಅಚ್ಚರಿ ಕಾದಿತ್ತು. ಆ ಅಚ್ಚರಿ ಏನು ಅಂತೀರಾ?

ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ
author img

By

Published : Aug 5, 2019, 5:14 PM IST

Updated : Aug 5, 2019, 5:31 PM IST

ತುಮಕೂರು: ನಾಡಿನಾದ್ಯಂತ ನಾಗರಪಂಚಮಿಯನ್ನ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆದ್ರೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ನಾಗರ ಕಲ್ಲಿಗೆ ಪೂಜೆ ಮಾಡಲು ಬರುವಂತಹ ಭಕ್ತರಿಗೆ ಅಚ್ಚರಿ ಕಾದಿತ್ತು.

ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ಹುತ್ತಕ್ಕೆ ಭಕ್ತರಿಂದ ಪೂಜೆ

ಹೌದು, ನಾಗರ ಕಲ್ಲಿಗೆ ಹಾಲು ಹಾಕುವ ಬದಲು ಹಸಿದ ಮಕ್ಕಳಿಗೆ ಮತ್ತು ಬಡ ಮಕ್ಕಳ ಹಸಿವು ನೀಗಿಸಲು ಇಲ್ಲಿರುವ ಪಾತ್ರೆಯಲ್ಲಿ ಹಾಕಿ ಎಂದು ಬ್ಯಾನರ್​ ಕಟ್ಟಲಾಗಿದ್ದು, ಮಾನವ ಬಂಧುತ್ವ ವೇದಿಕೆಯಿಂದ ಈ ರೀತಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇನ್ನು ಹುತ್ತಕ್ಕೆ ಹಾಲು ಹಾಕುವ ಬದಲು ಹಸಿದ ಹೊಟ್ಟೆಗೆ ಹಾಲನ್ನು ಕೊಡಿ, ಹುತ್ತಕ್ಕೆ ಹಾಲು ಹಾಕಿ ವ್ಯರ್ಥ ಮಾಡಬೇಡಿ, ಇದು ಮೌಢ್ಯದ ಪರಮಾವಧಿ, ಅಪೌಷ್ಟಿಕ ಮಕ್ಕಳಿಗೆ ಹಾಲು ವಿತರಿಸೋಣ ಎಂಬ ಸ್ಲೋಗನ್​ಗಳೊಂದಿಗೆ ಬ್ಯಾನರ್​ಗಳನ್ನು ಕಟ್ಟಲಾಗಿದೆ. ಆದ್ರೆ ಇನ್ನೊಂದೆಡೆ ಸಾರ್ವಜನಿಕರು ಮಾತ್ರ ಹುತ್ತಕ್ಕೆ ಹಾಲು ಮತ್ತು ಹೂ ಗಳನ್ನು ಹಾಕಿ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ಸಾಮಾನ್ಯವಾಗಿತ್ತು. ಹಾಗೆಯೇ ಜಿಲ್ಲೆಯಲ್ಲಿ ನಾಗರ ಪಂಚಮಿ ದಿನ ಬಸವ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

Intro:ನಾಗರ ಕಲ್ಲಿಗೆ ಹಾಕುವ ಹಾಲನ್ನು ಪಾತ್ರೆಗೆ ಹಾಕಿ......

ತುಮಕೂರು:
ನಾಡಿನೆಲ್ಲೆಡೆ ನಾಗರಪಂಚಮಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ ಆದರೆ ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ನಾಗರ ಕಲ್ಲಿಗೆ ಪೂಜೆ ಮಾಡಲು ಬರುವಂತಹ ಭಕ್ತರಿಗೆ ಅಚ್ಚರಿ ಕಾದಿದೆ.
ನಾಗರ ಕಲ್ಲಿಗೆ ಹಾಲನ್ನು ಹಾಕುವ ಬದಲು ಹಸಿದ ಮಕ್ಕಳಿಗೆ ಮತ್ತು ಬಡಮಕ್ಕಳಿಗೆ ಹಸಿವನ್ನು ನೀಗಿಸಲು ಇಲ್ಲಿರುವ ಪಾತ್ರೆಯಲ್ಲಿ ಹಾಕಿ ಎಂದು ಬ್ಯಾನರನ್ನು ಕಟ್ಟಲಾಗಿದೆ.
ಹೌದು ಮಾನವ ಬಂಧುತ್ವ ವೇದಿಕೆ ವತಿಯಿಂದ ಈ ರೀತಿಯಾದ ಒಂದು ಕಾರ್ಯಕ್ರಮವನ್ನು ನಾಗರ ಕಲ್ಲುಗಳ ಬಳಿ ಆಯೋಜಿಸಲಾಗಿದೆ. ನಾಗರಪಂಚಮಿ ದಿನ ಬಸವ ಪಂಚಮಿಯನ್ನು ಆಚರಿಸಲಾಗುತ್ತಿದೆ. ಹುತ್ತಕ್ಕೆ ಹಾಕುವ ಬದಲು ಹಸಿದ ಹೊಟ್ಟೆಗೆ ಹಾಲನ್ನು ಕೊಡಿ, ಹುತ್ತಕ್ಕೆ ಹಾಲು ಹಾಕಿ ವ್ಯರ್ಥ ಮಾಡಬೇಡಿ, ಇದು ಮೌಢ್ಯದ ಪರಮಾವಧಿ, ಅಪೌಷ್ಟಿಕ ಮಕ್ಕಳಿಗೆ ಹಾಲು ವಿತರಿಸೋಣ ಎಂಬ ಸ್ಲೋಗನ್ ಗಳೊಂದಿಗೆ ಬ್ಯಾನರ್ ಗಳನ್ನು ಕಟ್ಟಲಾಗಿದೆ.

ಇನ್ನೊಂದೆಡೆ ಸಾರ್ವಜನಿಕರು ಮಾತ್ರ ಹುತ್ತಕ್ಕೆ ಹಾಲು ಮತ್ತು ಹೂ ಗಳನ್ನು ಹಾಕಿ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ಸಾಮಾನ್ಯ ವಾಗಿತ್ತು.Body:TumakuruConclusion:
Last Updated : Aug 5, 2019, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.