ತುಮಕೂರು: ಕೊರೊನಾ ಭೀತಿಯ ನಡುವೆಯೂ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದು, ಮೀನು ಖರೀದಿಗೆ ಬಂದ ಜನ ಅಂತರ ಮರೆತು ದುರಂತಕ್ಕೆ ಎಡೆಮಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಸಾರ್ವಜನಿಕರು ಮೀನಿಗಾಗಿ ಕಿತ್ತಾಟ ನಡೆಸಿದ್ದು, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೆ, ಗುಂಪುಗುಂಪಾಗಿ ನಿಂತು ಕೆರೆ ಸಮೀಪ ಮೀನು ಖರೀದಿಯಲ್ಲಿ ತೊಡಗಿದ್ದರು. ಮುಂಜಾನೆ 7 ಗಂಟೆಯಿಂದ ಆರಂಭವಾದ ಮೀನಿನ ವ್ಯಾಪಾರ ಬೆಳಗ್ಗೆ 9 ಗಂಟೆಯವರೆಗೂ ನಡೆಯಿತು. ಜನರಲ್ಲಿ ಕೋವಿಡ್-19 ಭಯ ಇಲ್ಲದಿರುವುದು ಸ್ಪಷ್ಟವಾಗಿತ್ತು.