ETV Bharat / city

ಪೊಲೀಸ್ ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ತುಮಕೂರು SP - Tumkur

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಮೂವರು ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯ ಲೋಪ ಎಸಗಿದ ಆರೋಪದಡಿ ಅಮಾನತುಗೊಳಿಸಲಾಗಿದೆ.

Tumkur SP
ಎಸ್​ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್
author img

By

Published : Aug 2, 2021, 7:01 PM IST

ತುಮಕೂರು: ವ್ಯವಸ್ಥೆಯಲ್ಲಿ ಲೋಪವಾಗದಿರಲೆಂಬ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ವಿಶೇಷ ಪ್ರಯತ್ನವೊಂದಕ್ಕೆ ಮುಂದಾಗಿದ್ದಾರೆ. ಅದು ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಇಬ್ಬರಿಗೂ ಎಚ್ಚರಿಕೆ ಗಂಟೆಯಂತಾಗಿದೆ. ಪೊಲೀಸ್ ಅಧಿಕಾರಿಗಳ ಕಡೆಯಿಂದ ಲೋಪವಾದರೆ ಮುಲಾಜಿಲ್ಲದೇ ಅವರಿಗೆ ಅಮಾನತು ಶಿಕ್ಷೆ ವಿಧಿಸುತ್ತಿದ್ದಾರೆ.

ಎಸ್​ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್

ಹೌದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಮೂವರು ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯ ಲೋಪ ಎಸಗಿದ ಆರೋಪದಡಿ ಅಮಾನತುಗೊಳಿಸಲಾಗಿದೆ. ಅಲ್ಲದೇ, ಸಾರ್ವಜನಿಕರು ಮತ್ತು ಪೊಲೀಸ್ ನಡುವಿನ ವ್ಯವಸ್ಥೆ ಲೋಪಗಳಾದರೆ ಎರಡೂ ಕಡೆ ಕಣ್ಣಿರಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ತುಮಕೂರು ಎಸ್​​ಪಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ಅವಧಿಯಲ್ಲಿ ಇಬ್ಬರು ಸಬ್​​ ಇನ್ಸ್​​ಪೆಕ್ಟರ್ ಮತ್ತು ಓರ್ವ ಹೆಡ್ ಕಾನ್ಸ್​​ಟೇಬಲ್ ಅಮಾನತುಗೊಂಡಿದ್ದಾರೆ.ಇದರಿಂದ ಪೊಲೀಸ್ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೆಲವರಿಗೆ ಆತಂಕ ಉಂಟಾಗಿದೆ.

ಅಮಾನತುಗೊಂಡಿರುವ ಸಿಬ್ಬಂದಿಗಳಲ್ಲಿನ ಎರಡು ಪ್ರಕರಣದಲ್ಲಿ ಇಬ್ಬರೂ ಸಂಪೂರ್ಣ ತಪ್ಪು ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಆದರೆ, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ವ್ಯವಸ್ಥೆಯಲ್ಲಿ ಇಂತಹ ಲೋಪಗಳನ್ನು ಸಹಿಸುವುದಿಲ್ಲ ಎಂಬ ಸಂದೇಶ ತಲುಪಿಸಲು ಮುಂದಾಗಿದ್ದೇನೆ. ಇಂತಹ ಪ್ರಕರಣಗಳ ಹಿಂದೆ ಪೊಲೀಸ್ ಸಿಬ್ಬಂದಿ ಸಹ ಸೇರಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಅವರೆಲ್ಲರಿಗೂ ಏನು ಪಾಠ ಕಲಿಸಬೇಕಿದೆಯೋ ಅದನ್ನು ಕಲಿಸುತ್ತೇವೆ ಎಂದು ಎಸ್​ಪಿ ರಾಹುಲ್ ಕುಮಾರ್ ಖಡಕ್ ಉತ್ತರ ನೀಡುತ್ತಿದ್ದಾರೆ .

ETV Bharat Logo

Copyright © 2025 Ushodaya Enterprises Pvt. Ltd., All Rights Reserved.