ETV Bharat / city

ಸೇವಂತಿಗೆ ಬೆಳೆದು ಲಾಭದ ಸಿಹಿ ಸವಿಯುತ್ತಿರುವ ತುಮಕೂರು ರೈತರು - Tumkur chrysanthemum Crop news

ಕಳೆದ ವರ್ಷ ಲಾಕ್​ಡೌನ್ ಹಾಗೂ ಕೊರೊನಾ ಸೋಂಕು ಭೀತಿಯಿಂದ ಪುಷ್ಪೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಆದರೆ, ಈ ಬಾರಿ ಮಳೆ ಹದವಾಗಿ ಬೀಳುತ್ತಿರುವುದರಿಂದ ಗುಣಮಟ್ಟದ ಸೇವಂತಿಗೆ ರೈತರ ಕೈ ಸೇರುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸುತ್ತಿದೆ.

ಸೇವಂತಿಗೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿರುವ ರೈತರು
chrysanthemum Crop
author img

By

Published : Sep 1, 2021, 1:22 PM IST

ತುಮಕೂರು: ಜಿಲ್ಲೆಯ ಬಹುತೇಕ ಬಯಲುಸೀಮೆ ಪ್ರದೇಶಗಳಲ್ಲಿ ಪುಷ್ಪೋದ್ಯಮವನ್ನೇ ಅವಲಂಬಿಸಿರುವ ರೈತರು ಈ ಬಾರಿ ಬಂಪರ್ ಲಾಭ ಪಡೆಯುತ್ತಿದ್ದಾರೆ. ಮುಖ್ಯವಾಗಿ ಸೇವಂತಿ ಹೂವು ಬೆಳೆದಿರುವ ರೈತರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದೆ.

ಕಳೆದ ವರ್ಷ ಇದೇ ಸಂದರ್ಭದಲ್ಲಿ ಲಾಕ್​ಡೌನ್ ಹಾಗೂ ಕೊರೊನಾ ಸೋಂಕು ಭೀತಿಯಿಂದ ಪುಷ್ಪೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಉತ್ತಮ ಫಸಲು ದೊರೆತಿದ್ದರೂ ಸಹ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡಿದ್ದರಿಂದ ರೈತರು ಹೂವಿನ ಫಸಲನ್ನು ಸಂಪೂರ್ಣ ನಾಶ ಮಾಡಿದ್ದರು. ಆದರೆ, ಈ ಬಾರಿ ಮಳೆ ಹದವಾಗಿ ಬೀಳುತ್ತಿರುವುದರಿಂದ ಗುಣಮಟ್ಟದ ಸೇವಂತಿಗೆ ಹೂವು ರೈತರ ಕೈ ಸೇರುತ್ತಿದೆ. ಉತ್ಕೃಷ್ಟ ಗುಣಮಟ್ಟದ ಹೂವಿಗೂ ಕೂಡ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸುತ್ತಿದ್ದು, ರೈತರು ಆರ್ಥಿಕವಾಗಿ ಸದೃಢರಾಗುವಂತಾಗಿದೆ.

ಸೇವಂತಿಗೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿರುವ ರೈತರು

ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಸೇವಂತಿಗೆ 300 ರಿಂದ 350 ರೂ.ಗೆ ಮಾರಾಟವಾಗುತ್ತಿದೆ. ರೈತರು ಸೇವಂತಿ ಬೆಳೆಯಲು ಎಕರೆಗೆ ಕನಿಷ್ಠ 50 ರಿಂದ 60 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ. ನಿರಂತರವಾಗಿ ಮೂರು ತಿಂಗಳ ಕಾಲ ಪ್ರತಿ ಎರಡು ದಿನಕ್ಕೊಮ್ಮೆ ಹೂವನ್ನು ಕಿತ್ತು ಮಾರುಕಟ್ಟೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದು, ರೈತರು ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ.

ಜಿಲ್ಲೆಯ ಕೊರಟಗೆರೆ, ಶಿರಾ ಹಾಗೂ ತುಮಕೂರು ತಾಲೂಕಿನ ಭಾಗದ ರೈತರು ಸೇವಂತಿಗೆ ಬೆಳೆಯನ್ನೇ ಹೆಚ್ಚಾಗಿ ಆಶ್ರಯಿಸಿದ್ದಾರೆ. ಇದನ್ನು ಉಪ ಬೆಳೆಯನ್ನಾಗಿ ಬೆಳೆಯುವ ರೈತರು ಈ ಬಾರಿ ಭರ್ಜರಿ ಲಾಭ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.