ETV Bharat / city

ತುಮಕೂರು ಜಿಪಂ ಸಭೆ: ಅನುದಾನ ಉಳಿಸಿಕೊಳ್ಳಲು ಸದಸ್ಯರ ಹರಸಾಹಸ - ತುಮಕೂರು ಜಿಲ್ಲಾ ಪಂಚಾಯತಿ ಅನುದಾನ

ಕಾಮಗಾರಿಯ ಬಿಲ್​ನ್ನು ಜಿಲ್ಲಾ ಖಜಾನೆಗೆ ಸಲ್ಲಿಸಲು ಮಾರ್ಚ್​ 8 ಕೊನೆ ದಿನವಾಗಿದೆ. ಅಷ್ಟರಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಹೀಗಾಗಿ ಕಾಮಗಾರಿ ಬದಲಾಯಿಸಲು ಸಾಧ್ಯವೇ ಎಂಬ ಯಕ್ಷ ಪ್ರಶ್ನೆ ಸದಸ್ಯರಲ್ಲಿ ಮೂಡಿತ್ತು. ಅಲ್ಲದೆ ಈಗಾಗಲೇ ಅನುಮೋದನೆ ದೊರೆತಿರೋ ಕಾಮಗಾರಿಗಳನ್ನು ಅತ್ಯಲ್ಪ ಅವಧಿಯಲ್ಲಿ ಪೂರ್ಣಗೊಳಿಸುವ ವೇಳೆ ಅವುಗಳ ಗುಣಮಟ್ಟದ ಬಗ್ಗೆ ಸದಸ್ಯರು ಆತಂಕ ವ್ಯಕ್ತಪಡಿಸಿದರು.

tumkur-district-panchayat-special-general-meeting
ವಿಶೇಷ ಸಾಮಾನ್ಯ ಸಭೆ
author img

By

Published : Feb 4, 2021, 3:36 PM IST

ತುಮಕೂರು : ಈ ವರ್ಷದ ಅನುದಾನ ವಾಪಸ್ಸಾಗುವ ಆತಂಕ ತುಮಕೂರು ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಕಾಡಿತ್ತು. ಈ ಬಾರಿಯ ಕೊನೆಯ ವಿಶೇಷ ಸಾಮಾನ್ಯ ಸಭೆಯಲ್ಲಿದ್ದ ಬಹುತೇಕ ಜಿ.ಪಂ. ಸದಸ್ಯರು ಈ ಕುರಿತು ಗಂಭೀರ ಚರ್ಚೆ ನಡೆಸಿದರು. ಅಲ್ಲದೆ ಅನುದಾನ ವಾಪಸ್ಸಾದ್ರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳು ನಿರ್ವಹಿಸಿದ ಕಾಮಗಾರಿಗಳನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದು ಗಮನಾರ್ಹವಾಗಿತ್ತು. ಅನುಮೋದನೆ ಪಡೆದು ಹಣ ಹಂಚಿಕೆಯಾಗಿರುವ ಸುಮಾರು 50ಕ್ಕೂ ಹೆಚ್ಚು ಕಾಮಗಾರಿಗಳ ಬದಲಾಗಿ ಇತರೆ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಲಾಯಿತು.

ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ

ಕಾಮಗಾರಿಯ ಬಿಲ್​ನ್ನು ಜಿಲ್ಲಾ ಖಜಾನೆಗೆ ಸಲ್ಲಿಸಲು ಮಾರ್ಚ್ 8 ಕೊನೆ ದಿನವಾಗಿದೆ. ಅಷ್ಟರಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಹೀಗಾಗಿ ಕಾಮಗಾರಿ ಬದಲಾಯಿಸಲು ಸಾಧ್ಯವೇ ಎಂಬ ಯಕ್ಷ ಪ್ರಶ್ನೆ ಸದಸ್ಯರಲ್ಲಿ ಮೂಡಿತ್ತು. ಅಲ್ಲದೆ ಈಗಾಗಲೇ ಅನುಮೋದನೆ ದೊರೆತಿರುವ ಕಾಮಗಾರಿಗಳನ್ನು ಅತ್ಯಲ್ಪ ಅವಧಿಯಲ್ಲಿ ಪೂರ್ಣಗೊಳಿಸುವ ವೇಳೆ ಅವುಗಳ ಗುಣಮಟ್ಟದ ಬಗ್ಗೆ ಸದಸ್ಯರು ಆತಂಕ ವ್ಯಕ್ತಪಡಿಸಿದರು.

ಅಲ್ಲದೆ ಅನುದಾನ ಬಳಕೆ ಮಾಡಿಕೊಳ್ಳೋ ತರಾತುರಿಯಲ್ಲಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಯೋಜನೆ ತಯಾರಿಸುತ್ತಿದ್ದಾರೆ. ಈ ಬಗ್ಗೆ ಸದಸ್ಯರ ಗಮನಕ್ಕೆ ತರುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಸಭೆಯಲ್ಲಿ ಜಿ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಅಂಗವಿಕಲರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಸದಸ್ಯ ಹುಚ್ಚಯ್ಯ ಆರೋಪಿಸಿದರು. ಇದಕ್ಕೆ ಇಲಾಖೆ ಅಧಿಕಾರಿ, ರಮೇಶ್ ಅವರ ಉತ್ತರದಿಂದ ಅಸಮಾಧಾನಗೊಂಡ ಹುಚ್ಚಯ್ಯ, ಅಧಿಕಾರಿಯನ್ನು ಸಭೆಯಿಂದ ಹೊರಹಾಕಿ ಎಂದು ಆಗ್ರಹಿಸಿದರು.

ಇನ್ನು ಬಹುತೇಕ ಜಿ.ಪಂ. ವಿಶೇಷ ಸಭೆಗಳು ಕೋರಂ ಕೊರತೆಯಿಂದ ನಡೆಯುತ್ತಿರಲಿಲ್ಲ. ಅನೇಕ ದಿನಗಳ ನಂತರ ಕೋರಂ ನಿಭಾಯಿಸಲು ಸಭೆ ಸಾಕಷ್ಟು ಹರಸಾಹಸ ಪಡೆಯಬೇಕಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.