ETV Bharat / city

ಸ್ವಚ್ಛತೆಗೆ ಮಹತ್ವ ಕೊಡದ ತುಮಕೂರು ಪಾಲಿಕೆ: ಸೋಂಕಿನ ಭಯದಲ್ಲಿ ವ್ಯಾಪಾರಸ್ಥರು

ಹೊರಪೇಟೆ ಮತ್ತು ಮಂಡಿಪೇಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಸ್ಥಳದಲ್ಲಿ ಪಾಲಿಕೆ ಅಧಿಕಾರಿಗಳು ಬ್ಲೀಚಿಂಗ್ ಪೌಡರ್ ಹಾಗೂ ಸ್ಯಾನಿಟೈಸರ್ ಕಾಲಕಾಲಕ್ಕೆ ಮಾಡದೇ ಸ್ವಚ್ಛತೆಗೆ ಗಮನಹರಿಸಿಲ್ಲ. ಇದರಿಂದಾಗಿ ಕೊರೊನಾ ಸೋಂಕು ಹರಡುವಿಕೆ ಭೀತಿ ನಡುವೆ ವ್ಯಾಪಾರ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

tumakuru-metropolitan-policy-
ಸ್ವಚ್ಛತೆಗೆ ಮಹತ್ವ ಕೊಡದ ತುಮಕೂರು ಪಾಲಿಕೆ
author img

By

Published : Jun 22, 2021, 10:59 PM IST

ತುಮಕೂರು: ಲಾಕ್​​ಡೌನ್ ಸಡಿಲಿಕೆ ನಂತರ ಬೀದಿ ಬದಿ ವ್ಯಾಪಾರಿಗಳು ಕೂರುವ ಸ್ಥಳದಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡದೇ ತುಮಕೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದ್ದು, ಅನೈರ್ಮಲ್ಯತೆಯಿಂದ ಕೂಡಿರುವ ಜಾಗದಲ್ಲಿ ಭಯಭೀತಿಯಿಂದಲೇ ವ್ಯಾಪಾರ ವಹಿವಾಟು ನಡೆಸುವಂತಾಗಿದೆ.

ಸ್ವಚ್ಛತೆಗೆ ಮಹತ್ವ ಕೊಡದ ತುಮಕೂರು ಪಾಲಿಕೆ

ಓದಿ: 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್: ಡಿಸಿಎಂ ಅಶ್ವತ್ಥನಾರಾಯಣ

ನಗರದ ಹೊರಪೇಟೆ ಮತ್ತು ಮಂಡಿಪೇಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಸ್ಥಳದಲ್ಲಿ ಪಾಲಿಕೆ ಅಧಿಕಾರಿಗಳು ಬ್ಲೀಚಿಂಗ್ ಪೌಡರ್ ಹಾಗೂ ಸ್ಯಾನಿಟೈಸರ್ ಕಾಲಕಾಲಕ್ಕೆ ಮಾಡದೇ ಸ್ವಚ್ಛತೆಗೆ ಗಮನಹರಿಸಿಲ್ಲ. ಇದರಿಂದಾಗಿ ಕೊರೊನಾ ಸೋಂಕು ಹರಡುವಿಕೆ ಭೀತಿ ನಡುವೆಯೇ ವ್ಯಾಪಾರ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಲಾಕ್​​ಡೌನ್​​ಗೂ ಮುನ್ನ ತುಮಕೂರು ನಗರ ವ್ಯಾಪ್ತಿಯಲ್ಲಿನ ಬೀದಿ ವ್ಯಾಪಾರ ಮಾಡುವ ಸ್ಥಳದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿ ಸ್ವಚ್ಛತೆ ಮಾಡಲಾಗಿತ್ತು. ಆದರೆ, ಲಾಕ್​​ಡೌನ್ ಸಡಿಲಿಕೆ ನಂತರ ಪಾಲಿಕೆಯ ಅಧಿಕಾರ ಇದರತ್ತ ಗಮನಹರಿಸಿಲ್ಲ. ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಗಳನ್ನು ಧರಿಸಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿದ್ದಾರೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಅನೇಕ ಬೀದಿ ಬದಿ ವ್ಯಾಪಾರಿಗಳು ಸೋಂಕಿಗೆ ಒಳಗಾಗಿ ಬಳಲಿದ್ದಾರೆ. ಇದೀಗ ವಿಧಿಯಿಲ್ಲದೇ ತರಕಾರಿ, ಹೂವು - ಹಣ್ಣು, ಕಾಯಿ ಮಾರಾಟದಲ್ಲಿ ತೊಡಗಿರುವ ವ್ಯಾಪಾರಿಗಳು ಪಾಲಿಕೆಯ ನಿರ್ಲಕ್ಷ್ಯದಿಂದ ಭಯದಿಂದಲೇ ವ್ಯಾಪಾರ ಮಾಡುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.