ETV Bharat / city

ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಲಸಿಕೆ : ತುಮಕೂರು ಡಿಸಿ - ತುಮಕೂರು ಡಿಸಿ

ಶನಿವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಸಮರ್ಪಕವಾಗಿ ಲಸಿಕೆ ಲಭ್ಯವಾಗಲಿದೆ. ಹಾಗಾಗಿ, ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು..

tumakuru-district-collector-
ತುಮಕೂರು ಡಿಸಿ
author img

By

Published : Jun 18, 2021, 10:53 PM IST

ತುಮಕೂರು : ಕೋವಿಡ್ ಮೊದಲನೇ ಲಸಿಕೆ ಪಡೆದು 84 ದಿನ ಪೂರೈಸಿ, ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಸಾರ್ವಜನಿಕರು ಸೇರಿದಂತೆ 21,592 ಫ್ರಂಟ್‌ಲೈನ್ ಹಾಗೂ ಹೆಲ್ತ್ ಕೇರ್ ವರ್ಕರ್ಸ್‌ಗಳಿಗೆ ಆದ್ಯತೆ ಮೇರೆಗೆ ಶನಿವಾರ ಮತ್ತು ಭಾನುವಾರದಂದು ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಓದಿ: ‘ಬಂಡಾಯ’ದ ವಿರುದ್ಧ ಗೆದ್ದ ಯಡಿಯೂರಪ್ಪ.. ಕುರ್ಚಿ ಭದ್ರವಾಗಿಸಿಕೊಂಡ ಸಿಎಂ..!

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಲಸಿಕೆ ಪೂರೈಕೆಯಾಗಲಿದೆ. ಶನಿವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಸಮರ್ಪಕವಾಗಿ ಲಸಿಕೆ ಲಭ್ಯವಾಗಲಿದೆ. ಹಾಗಾಗಿ, ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 5,74,781 ಮೊದಲ ಡೋಸ್, 1,23,577 ಎರಡನೇ ಡೋಸ್ ಸೇರಿ ಸುಮಾರು 7 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಹೆಲ್ತ್‌ಕೇರ್ ವರ್ಕರ್ಸ್‌ಗಳಿಗೆ 22,222 ಮೊದಲ ಡೋಸ್, 17,000 ಎರಡನೇ ಡೋಸ್, ಫ್ರಂಟ್ ಲೈನ್ ವರ್ಕರ್ಸ್‌ಗೆ 19,431 ಮೊದಲನೇ ಡೋಸ್, 8560 ಎರಡನೇ ಡೋಸ್ ನೀಡಲಾಗಿದೆ.

18 ರಿಂದ 44 ವರ್ಷದೊಳಗಿನವರಿಗೆ 84,032 ಮೊದಲನೇ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಇನ್ನೂ ಯಾರಿಗೂ ನೀಡಿಲ್ಲ. ಉಳಿದಂತೆ 45 ವರ್ಷದಿಂದ 60 ವರ್ಷದೊಳಗಿನವರಿಗೆ 2,51,318 ಮೊದಲ ಡೋಸ್, 38,472 ಎರಡನೇ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 1,98,778 ಮೊದಲನೇ ಡೋಸ್, 59,545 ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ಮೊದಲ ಮತ್ತು ಎರಡನೇ ಡೋಸ್ ಎರಡೂ ಸೇರಿ ಚಿಕ್ಕನಾಯನಕಹಳ್ಳಿಯಲ್ಲಿ 53,732, ಗುಬ್ಬಿ-65,824, ಕೊರಟಗೆರೆ-41,745, ಕುಣಿಗಲ್-54,730, ಮಧುಗಿರಿ-60,296, ಪಾವಗಡ-48,636, ಶಿರಾ-69,541, ತಿಪಟೂರು-64,269, ತುಮಕೂರು18,9364, ತುರುವೇರೆಕೆರೆಯಲ್ಲಿ 50,222 ಡೋಸ್ ಲಸಿಕೆ ವಿತರಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಶೇ.57ರಷ್ಟು ಹಾಗೂ 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪುಗಳಿಗೆ ಶೇ.7ರಷ್ಟು ಲಸಿಕಾಕರಣ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚು ಲಸಿಕಾಕರಣ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಗ್ರಾಮೀಣ ಜನರಿಗೆ ಅನುಕೂಲವಾಗುವ ರೀತಿ ಲಸಿಕೆ ಪಡೆಯಲು ಹತ್ತಿರದ ಪಿಹೆಚ್‌ಸಿಗಳಲ್ಲಿ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚಾಗಿ ಲಸಿಕಾಕರಣ ಕಾರ್ಯ ಗ್ರಾಮೀಣ ಭಾಗದಲ್ಲಿಯೂ ನಡೆಯುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಚಿಕ್ಕನಾಯಕನಹಳ್ಳಿಯಲ್ಲಿ 1,384, ಗುಬ್ಬಿ-2,668, ಕೊರಟಗೆರೆ-1,440, ಕುಣಿಗಲ್-1,684, ಮಧುಗಿರಿ-1,950, ಪಾವಗಡ-1,561, ಶಿರಾ- 2,346, ತಿಪಟೂರು-2,009, ತುಮಕೂರು-5,263 ಹಾಗೂ ತುರುವೇಕೆರೆಯಲ್ಲಿ 1,323 ಸೇರಿ ಒಟ್ಟು 21,592 ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿದ್ದಾರೆ. ಇವರೆಲ್ಲರಿಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯ ಸಾಧಿಸಿ ಲಸಿಕೆ ನೀಡಬೇಕು ಎಂದು ನಿರ್ದೇಶಿಸಿದರು.

ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಬೇಕು ಮತ್ತು ಸಾಕಾಗುವಷ್ಟು ಸರ್ಕಾರದಿಂದ ಸರಬರಾಜಗಲಿರುವ ಲಸಿಕೆಯನ್ನು ಒದಗಿಸಬೇಕು. ತಾಲೂಕು ಮಟ್ಟದಲ್ಲಿ ತಂಡ ರಚಿಸಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸಿ ಲಸಿಕೆ ತೆಗೆದುಕೊಳ್ಳಲು ಮನವೊಲಿಸಬೇಕು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳನ್ನು ಲಸಿಕಾಕರಣಕ್ಕೆ ಸಜ್ಜುಗೊಳಿಸಬೇಕು. ಎರಡನೇ ಡೋಸ್ ಪಡೆಯಬೇಕಿರುವ ಎಲ್ಲಾ ಅರ್ಹರಿಗೆ ಜಿಲ್ಲಾ ಮಟ್ಟದಿಂದ ಮಾಹಿತಿ ಸಂದೇಶ ಹಾಗೂ ದೂರವಾಣಿ ಮೂಲಕ ಮಾಹಿತಿ ನೀಡಿ ಲಸಿಕಾಕರಣ ಯಶಸ್ವಿಗೊಳಿಸಬೇಕು. ಹೆಚ್ಚುವರಿಯಾಗಿ ಆಪ್ತಮಿತ್ರ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು. ಆಪ್ತಮಿತ್ರ ಸಿಬ್ಬಂದಿ ಆರ್‌ಸಿಹೆಚ್ ಅಧಿಕಾರಿಗಳಿಂದ ಯಾವ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಯಾವ ಲಸಿಕೆ ಎಷ್ಟು ಡೋಸ್‌ಗಳು ಲಭ್ಯವಿದೆ ಎಂಬ ಮಾಹಿತಿ ಪಡೆದು ಫಲಾನುಭವಿಗಳಿಗೆ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.