ETV Bharat / city

ತುಮಕೂರು ಮಾರುಕಟ್ಟೆ ಧಾರಣೆ: ಮೆಣಸಿನಕಾಯಿ, ಬಾಳೆಹಣ್ಣು ದುಬಾರಿ - Tumkur

ಶುಭ ಕಾರ್ಯಗಳಿಲ್ಲದೆ ಹಣ್ಣುಗಳ ದರ ಇಳಿಕೆಯತ್ತ ಸಾಗಿದ್ದು, ಹೂವಿನ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಕೆಲ ಕಾಯಿಪಲ್ಲೆ ಹೊರತುಪಡಿಸಿ, ತರಕಾರಿಗಳ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ.

Tumkur Market
ತುಮಕೂರು ಮಾರುಕಟ್ಟೆ
author img

By

Published : Sep 20, 2021, 10:45 PM IST

ತುಮಕೂರು: ಪ್ರಸ್ತುತ ಸಂಪ್ರದಾಯದಂತೆ ಪಿತೃ ಪಕ್ಷ ಆಚರಣೆಗೆ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಶುಭ ಕಾರ್ಯಗಳಿಲ್ಲದೆ ಹಣ್ಣುಗಳ ದರ ಇಳಿಕೆಯತ್ತ ಸಾಗಿದ್ದು, ಹೂವಿನ ದರದಲ್ಲಿ ದಿಢೀರ್ ಕುಸಿತವಾಗಿದೆ. ಕೆಲ ಕಾಯಿಪಲ್ಲೆ ಹೊರತುಪಡಿಸಿ, ತರಕಾರಿಗಳ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಇದು ತುಮಕೂರು ಮಾರುಕಟ್ಟೆಯ ವಹಿವಾಟಿನ ಸ್ಥಿತಿಗತಿ.

ಮಳೆ ಇಲ್ಲದಿರುವುದು ಸೊಪ್ಪಿನ ಬೆಲೆ ಇಳಿಕೆಯಾಗಲು ಕಾರಣವಾಗಿದೆ. ಧಾನ್ಯಗಳ ಬೆಲೆ ಯಥಾಸ್ಥಿತಿಯಿದೆ. ಕಳೆದ ವಾರ ಇಳಿಕೆ ಕಂಡು ಬಂದಿದ್ದ ಮೊಟ್ಟೆ ಧಾರಣೆ ಈ ವಾರ ಕೊಂಚ ಏರಿಕೆ ಕಂಡಿದೆ. ಏರಿದ್ದ ಡ್ರೈ ಫ್ರೂಟ್ಸ್ ಬೆಲೆಗಳು ಹಳೆಯ ದರಗಳಲ್ಲಿಯೇ ಮುಂದುವರಿದಿವೆ.

ಕೇಂದ್ರ ಸರ್ಕಾರ ಖಾದ್ಯ ತೈಲದ ಆಮದು ಸುಂಕವನ್ನು ಕೊಂಚ ತಗ್ಗಿಸಿರುವುದರಿಂದ ಚಿಲ್ಲರೆ ಅಡುಗೆ ಎಣ್ಣೆ ಬೆಲೆ ತುಸು ತಗ್ಗಿದೆ. ಎಲ್ಲಾ ಬ್ರಾಂಡ್‍ಗಳ ಎಣ್ಣೆ ದರ ಕೆಜಿಗೆ ರೂ.5 ರಷ್ಟು ಕಡಿಮೆಯಾಗಿದ್ದು, ಸನ್‍ ಫ್ಲವರ್ 155 ರಿಂದ 150 ರೂ, ಪಾಮಾಯಿಲ್ 130 ರಿಂದ 125 ರೂ.ಗೆ ಇಳಿಕೆಯಾಗಿದೆ. ದಿನಸಿ-ಧಾನ್ಯಗಳ ಬೆಲೆಗಳಲ್ಲಿ ಕಳೆದ ವಾರಕ್ಕೂ ಈ ವಾರಕ್ಕೂ ಅಂತಹ ವ್ಯಾತ್ಯಾಸಗಳೇನು ಆಗಿಲ್ಲ.

ತುಮಕೂರು ಮಾರುಕಟ್ಟೆ

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗಿದ್ದ ಬಾಳೆ ಹಣ್ಣಿನ ದರ ಇಳಿಯುವಂತೆ ಕಾಣುತ್ತಿಲ್ಲ. ಏಲಕ್ಕಿ ಬಾಳೆ, ಪಚ್ಚೆ ಬಾಳೆ, ನಾಟಿ ಎಲ್ಲಾ ವಿಧದ ಬಾಳೆ ಹಣ್ಣುಗಳ ದರ ಹೆಚ್ಚೆ ಇದೆ. ದಾಳಿಂಬೆ ಬೆಲೆ ಕೆಜಿಗೆ 20 ರೂ ಏರಿಕೆ ಕಂಡಿದ್ದರೇ, ಕರಬೂಜ, ಅನಾನಸ್ ದರಗಳು ಕೆಜಿಗೆ ತಲಾ 10 ರೂ. ಹೆಚ್ಚಳ ಕಂಡಿವೆ. ಉಳಿದಂತೆ ಇತರೆ ಹಣ್ಣುಗಳು ಹಿಂದಿನ ವಾರದ ಧಾರಣೆಯಲ್ಲಿಯೇ ಮಾರಾಟವಾಗುತ್ತಿವೆ. ಆದರೆ ಪಿತೃಪಕ್ಷ ಕಳೆದು ಆಯುಧ ಪೂಜೆಯ ವೇಳೆಗೆ ಹಣ್ಣಿನ ದರಗಳಲ್ಲಿ ಹೆಚ್ಚಳ ಆಗಬಹುದು ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಹಣ್ಣು ವ್ಯಾಪಾರಿ ಸುಂದರೇಶ್.

ಕಳೆದ ವಾರ 60 ರೂ.ಗೆ ಏರಿಕೆಯಾಗಿದ್ದ ಬೀನ್ಸ್ ಬೆಲೆ ಈ ವಾರ 40 ರೂ.ಗೆ ಇಳಿಕೆ ಕಂಡಿದೆ. ಅದೇ ರೀತಿ 20-30 ರೂ.ಗೆ ಇಳಿಕೆ ಕಂಡಿದ್ದ ಮೆಣಸಿನಕಾಯಿ ಬೆಲೆ ಕೆಜಿಗೆ 20 ರೂ ಹೆಚ್ಚಳ ಕಂಡು 50 ರೂ.ಗೆ ಏರಿಕೆ ಆಗಿದೆ. ಹೂ ಕೋಸು ಕೆಜಿಗೆ 20 ರೂ., ಬೀಟ್ರೂಟ್ ಕೆಜಿಗೆ 10 ರೂ. ಬೆಲೆ ಕಡಿಮೆಯಾಗಿದ್ದು, ಉಳಿದಂತೆ ತರಕಾರಿ ಬೆಲೆಗಳಲ್ಲಿ ಏರಿಕೆ ಆಗಿಲ್ಲ. ಮಳೆ ಕಡಿಮೆಯಾಗಿರುವುದರಿಂದ ಸೊಪ್ಪು ಕೊಳೆತು ಹಾಳಾಗದೆ ಉತ್ತಮ ಫಸಲು ದೊರೆಯುತ್ತಿದೆ. ಸೊಪ್ಪಿನ ಬೆಲೆಗಳು ಇಳಿಕೆಯಾಗಲು ಕಾರಣವಾಗಿವೆ ಎಂದು ಅಂದಾಜಿಸಲಾಗಿದೆ.

ಹಣ್ಣುಗಳ ಧಾರಣೆ (ಕೆ.ಜಿಗಳಲ್ಲಿ):

ಅಂತರಸನಹಳ್ಳಿ ಮಾರುಕಟ್ಟೆ-ತುಮಕೂರು, ಸೇಬು- 100-140 ರೂ., ದಾಳಿಂಬೆ:100-150, ಮೂಸಂಬಿ: 40-60., ಕಿತ್ತಳೆ: 40-60, ಸಪೋಟ: 60-80 ರೂ. ಏಲಕ್ಕಿ ಬಾಳೆ : 50-60ರೂ., ಪಚ್ಚ ಬಾಳೆ: 25-30ರೂ., ಪಪ್ಪಾಯ: 20 ರೂ., ಕಲ್ಲಂಗಡಿ: 20-30 ರೂ., ಕರ್ಬೂಜ: 40 ರೂ., ಸೀಬೆ : 40-50ರೂ., ಅನಾನಸ್​​: 50-60 ರೂ., ದ್ರಾಕ್ಷಿ: 160 ರೂ. ದರದಲ್ಲಿ ಮಾರಾಟವಾಗುತ್ತಿದೆ.

ತರಕಾರಿ ದರ (ಕೆ.ಜಿಗಳಲ್ಲಿ):
ಟೊಮ್ಯಾಟೊ: 14-15 ರೂ., ಈರುಳ್ಳಿ: 25 ರೂ. , ಆಲೂಗಡ್ಡೆ: 30 ರೂ., ಬೀನ್ಸ್: 40 ರೂ., ಕ್ಯಾರೆಟ್: 40 ರೂ., ಬೀಟ್ರೂಟ್: 30 ರೂ., ಮೂಲಂಗಿ: 30 ರೂ., ಗೆಡ್ಡೆಕೋಸು: 40 ರೂ., ಬೆಂಡೆಕಾಯಿ: 30 ರೂ., ಬದನೆಕಾಯಿ: 20-30ರೂ., ಎಲೆಕೋಸು: 20 ರೂ., ಹೂ ಕೋಸು 1ಕ್ಕೆ: 50 ರೂ., ಹಸಿ ಮೆಣಸಿನಕಾಯಿ: 40 ರೂ., ಕ್ಯಾಪ್ಸಿಕಂ:30-36 ರೂ. ಕೆ ಜಿ ಗೆ ಬಿಕರಿಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.