ETV Bharat / city

ಸಿಡಿ ನಕಲಿಯೋ, ಅಸಲಿಯೋ ಎಂಬುದು ತನಿಖೆಯಿಂದ ಸಾಬೀತಾಗಬೇಕು: ಮುರಳಿಧರ ಹಾಲಪ್ಪ - ರಮೇಶ್ ಜಾರಕಿಹೊಳಿ ಸಿಡಿ ಕೇಸ್

ಸಿಡಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯಿಂದ ಸಾಬೀತಾಗಬೇಕು. ರಮೇಶ್ ಜಾರಕಿಹೊಳಿ ವಿಷಯ ಪ್ರಸ್ತಾಪ ಮಾಡಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅವರು ಏನೇ ಅನಾಚಾರ ಮಾಡಿದ್ದರೂ ನಾವು ಮಾತನಾಡಬಾರದು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮುರಳಿಧರ ಹಾಲಪ್ಪ ಹೇಳಿದ್ದಾರೆ.

State Congress spokesman Muralidhara Halappa
ರಾಜ್ಯ ಕಾಂಗ್ರೆಸ್ ವಕ್ತಾರ ಮುರಳಿಧರ ಹಾಲಪ್ಪ
author img

By

Published : Mar 9, 2021, 4:02 PM IST

ತುಮಕೂರು: ರಮೇಶ್ ಜಾರಕಿಹೊಳಿ ಅವರಾಗಲಿ ಅಥವಾ ನಾವಾಗಲಿ ತಜ್ಞರಲ್ಲ. ಅದಕ್ಕೆ ಎಫ್ಎಸ್ಎಲ್ ಇದೆ. ಎಫ್ಎಸ್ಎಲ್ ಅಧಿಕಾರಿಗಳೇ ಸಿಡಿ ಬಗ್ಗೆ ಅಧಿಕೃತ ವರದಿ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮುರಳಿಧರ ಹಾಲಪ್ಪ ಹೇಳಿದ್ದಾರೆ.

ಸಿಡಿ ನಕಲಿಯೋ, ಅಸಲಿಯೋ ಎಂಬುದು ತನಿಖೆಯಿಂದ ಸಾಬೀತಾಗಬೇಕು: ಮುರಳಿಧರ ಹಾಲಪ್ಪ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಿಡಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯಿಂದ ಸಾಬೀತಾಗಬೇಕು. ಈಗವರು ಇದಕ್ಕೆ ಉತ್ತರದಾಯಿತ್ವರಾಗಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಇರುವವರೆಗೂ ಇಂತಹ ಹಲವು ಹಗರಣಗಳನ್ನು ನಾವು ನೋಡಿದ್ದೇವೆ. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಆ ವ್ಯವಸ್ಥೆಗೆ ಇವರುಗಳು ಬದ್ಧರಾಗಿರಬೇಕು ಎಂದು ತಿಳಿಸಿದರು.

ಓದಿ: ಸಿಡಿ ಪ್ರಕರಣ: ಷಡ್ಯಂತ್ರ ಮಾಡಿದವರನ್ನು ಮಟ್ಟಹಾಕೋದು ಖಚಿತ ಎಂದ ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ವಿಷಯ ಪ್ರಸ್ತಾಪ ಮಾಡಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅವರು ಏನೇ ಅನಾಚಾರ ಮಾಡಿದ್ದರೂ ನಾವು ಮಾತನಾಡಬಾರದು. ಮುಂಬೈಗೆ ತೆರಳಿದ್ದ ಬಾಂಬೆ ಬಾಯ್ಸ್ ಅವರುಗಳನ್ನು ಅಂದೇ ನಾವು ಬ್ಲೂ ಬಾಯ್ಸ್ ಎಂದು ಕರೆಯುತ್ತಿದ್ದವು. ಅವರುಗಳ ಚಲನ-ವಲನವನ್ನು ರೆಕಾರ್ಡ್ ಮಾಡಿ ಇರಿಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ಹೆದರಿಕೆಗೆ ಅವರುಗಳು ಕೋರ್ಟ್​ನಿಂದ ಸ್ಟೇ ತೆಗೆದುಕೊಂಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.