ತುಮಕೂರು : ಶೈಕ್ಷಣಿಕ ನಗರಿ ತುಮಕೂರು ನಗರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯಾನವನ ಪ್ರವೇಶಕ್ಕೆ ನಿಷೇಧ ಎಂಬ ಬೋರ್ಡ್ಗಳನ್ನು ಹಾಕಲಾಗಿದೆ. ಇಂತಹದೊಂದು ನಾಮಫಲಕಲಗಳು ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಸೂಲಗಿತ್ತಿ ನರಸಮ್ಮ ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಇಂತಹ ನಾಮಫಲಕಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಧಾರವೇ ಕಾರಣವಾಗಿದೆ.
ಆದರೆ ಪಾರ್ಕ್ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶಾಂತವಾಗಿ ಕುಳಿತು ಓದಲು ಅವಕಾಶ ಕಲ್ಪಿಸುವುದನ್ನು ಬಿಟ್ಟು ಈ ರೀತಿ ಮಾಡಿರುವುದಕ್ಕೆ ಸಾರ್ವಜನಿಕರಿಂದ ಬೇಸರ ವ್ಯಕ್ತವಾಗಿದೆ. ಅಲ್ಲದೇ ಪಾಲಿಕೆ ಅಧಿಕಾರಿಗಳ ಈ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸಾಮಾನ್ಯವಾಗಿ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಮಧ್ಯಾಹ್ನದ ಸಂದರ್ಭದಲ್ಲಿ ಊಟ ಮಾಡುವುದು ಹಾಗೂ ವಿಶ್ರಾಂತಿ ಪಡೆಯುತ್ತಾರೆ.
ವಿದ್ಯಾರ್ಥಿಗಳು ಉದ್ಯಾನವನದ ಪರಿಸರವನ್ನು ಹಾಳು ಮಾಡದಂತೆ ಅಗತ್ಯ ಕ್ರಮಗಳನ್ನು ಪಾಲಿಕೆ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ನಿಷೇಧ ಹೇರುವುದು ಸರಿಯಲ್ಲ. ಈ ರೀತಿ ಪೋಸ್ಟರ್ಗಳನ್ನು ಹಾಕಿರುವ ಕುರಿತು ಸ್ಪಷ್ಟನೆ ನೀಡಿರುವ ಪಾಲಿಕೆ ಅಧಿಕಾರಿ ಡಾ. ರಕ್ಷಿತ್, ಇತ್ತೀಚಿಗಷ್ಟೇ ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಕುಳಿತು ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ಈ ರೀತಿಯಾದ ಒಂದು ಕ್ರಮಕ್ಕೆ ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಉದ್ಯಾನವನದ ಪರಿಸರವನ್ನು ಹಾಳು ಗೆಡುವಂತಹ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆ ವಿನಹ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ರೀತಿ ಕಾಣುವುದು ಸರಿಯಲ್ಲ. ಪಾಲಿಕೆ ಅಧಿಕಾರಿಗಳ ಈ ನಿರ್ಧಾರದಿಂದಾಗಿ ಉತ್ತಮ ಪರಿಸರಕ್ಕಾಗಿ ಹಂಬಲಿಸುವ ವಿದ್ಯಾರ್ಥಿಗಳಿಗೆ ಪಾಲಿಕೆ ಅಧಿಕಾರಿಗಳು ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಡಿವೈಎಫ್ ಮುಖಂಡ ರಾಘವೇಂದ್ರ ಇದರ ಬಗ್ಗೆ ದನಿ ಎತ್ತಿದ್ದಾರೆ.
ಇದನ್ನೂ ಓದಿ : ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಯುವಕ.. ದೇಶದ ಅತಿ ಕಿರಿಯ ಸರಪಂಚ್ ಈ ನಾಯಕ