ತುಮಕೂರು: ಬೋನಿಗೆ ಬಿದ್ದ ಚಿರತೆಗೆ ಮುಚ್ಚು ತೋರಿಸಿ ಬೆದರಿಸಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾಚನಕಟ್ಟೆಯಲ್ಲಿ ನಡೆದಿದೆ.
ಅನೇಕ ದಿನಗಳಿಂದ ಕಾಚನಕಟ್ಟೆ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆ ಕೆಂಡಾಮಂಡಲವಾಗಿತ್ತು. ಈ ವೇಳೆ ಸ್ಥಳೀಯರು, ಬೋನಿನಲ್ಲಿದ್ದ ಚಿರತೆಗೆ ಮಚ್ಚು ತೋರಿಸಿ ಬೆದರಿಸಿದ್ದಾರೆ. ಇದನ್ನು ಕಂಡ ಚಿರತೆ ಮತ್ತಷ್ಟು ರೋಷಾವೇಷದಿಂದ ಅರಚಾಡಿದೆ. ಈ ರೀತಿ ಮಚ್ಚು ಹಿಡಿದು ಬೋನಿನಲ್ಲಿದ್ದ ಚಿರತೆಯನ್ನು ಕೆರಳಿಸಲು ಮುಂದಾಗಿರುವ ಕಿಡಿಗೇಡಿಗಳ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಚಿರತೆಗೆ ಯಾವುದೇ ರೀತಿಯ ಗಾಯಗಳಾಗಿಲ್ಲ, ಆರೋಗ್ಯವಾಗಿದೆ. ಜನವರಿ 8ರ ಸಂಜೆ 7 ಗಂಟೆ ಸಂದರ್ಭದಲ್ಲಿ ಸುಮಾರು ನಾಲ್ಕು ವರ್ಷ ವಯಸ್ಸಿನ ಚಿರತೆ ಬೋನಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.