ETV Bharat / city

ಚಿರತೆ ದಾಳಿಗೆ ಕುರಿಗಾಹಿ ಬಲಿ: ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ - ಕುಣಿಗಲ್ ತಾಲೂಕಲ್ಲಿ ಚಿರತೆ ದಾಳಿ

ಜಮೀನಿನ ಬಳಿ ಕುರಿ ಮೇಯಿಸುವ ವೇಳೆ ಚಿರತೆ ದಾಳಿ ನಡೆಸಿ ಕುರಿಗಾಹಿಯೊಬ್ಬರನ್ನು ಬಲಿ ಪಡೆದಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿ ಗ್ರಾಮದಲ್ಲಿ ನಡೆದಿದೆ.

Cheetah attack in Tumkur
ಚಿರತೆ ದಾಳಿಗೆ ಕುರಿಗಾಹಿ ಬಲಿ
author img

By

Published : Nov 29, 2019, 8:49 PM IST

ತುಮಕೂರು: ಕುಣಿಗಲ್ ತಾಲೂಕಿನಲ್ಲಿ ಕಳೆದ ತಿಂಗಳಷ್ಟೆ ಮಹಿಳೆಯೊಬ್ಬರನ್ನು ಬಲಿತೆಗೆದುಕೊಂಡಿದ್ದ ಚಿರತೆ, ಇಂದು ಕುರಿಗಾಹಿಯೊಬ್ಬರ ಮೇಲೆರಗಿ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿ ಗ್ರಾಮದಲ್ಲಿ ನಡೆದಿದೆ.

ಚಿರತೆ ದಾಳಿಗೆ ಕುರಿಗಾಹಿ ಬಲಿ

ದೊಡ್ಡ ಮರಳವಾಡಿ ಗ್ರಾಮದ ಅನಂದಯ್ಯ (60) ಚಿರತೆ ದಾಳಿಗೆ ಬಲಿಯಾದ ಕುರಿಗಾಹಿ. ಜಮೀನಿನ ಬಳಿ ಕುರಿ ಮೇಯಿಸುವಾಗ ದಾಳಿ ನಡೆಸಿದ ಚಿರತೆ, ಆನಂದಯ್ಯರ ಕುತ್ತಿಗೆಯನ್ನು ಕಚ್ಚಿ ಸಾಯಿಸಿದ್ದು, ಪದೇ ಪದೇ ನಡೆಯುತ್ತಿರುವ ಚಿರತೆ ದಾಳಿಯಿಂದ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಇನ್ನು ಚಿರತೆ ದಾಳಿ ತಡೆಯಲು ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ವಿರುದ್ಧ ಕುಣಿಗಲ್ ಶಾಸಕ ರಂಗನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಡಿಎಫ್ಒ ಗಿರೀಶ್, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವಲ್ಲಿ ಹರಸಾಹಸ ಪಟ್ಟರು. ಅಲ್ಲದೆ ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವುದಾಗಿ ಭರವಸೆ ನೀಡಿದರು.

Intro:Body:ಚಿರತೆಗೆ ಬಲಿಯಾದ ಕುರಿಗಾಹಿ…. ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ….
ತುಮಕೂರು :
ಕುಣಿಗಲ್ ತಾಲೂಕಿನ ಕಳೆದ ತಿಂಗಳಷ್ಟೆ ಮಹಿಳೆಯೊಬ್ಬರನ್ನು ಬಲಿತೆಗೆದುಕೊಂಡಿದ್ದ ಚಿರತೆ ಇಂದು ಕುರಿಗಾಹಿಯೊಬ್ಬರ ಮೇಲೆರಗಿ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿ ಗ್ರಾಮದಲ್ಲಿ ನಡೆದಿದೆ.
ದೊಡ್ಡ ಮರಳವಾಡಿ ಗ್ರಾಮದ ಅನಂದಯ್ಯ(60) ಚಿರತೆ ದಾಳಿಗೆ ಬಲಿಯಾದ ವೃದ್ದರಾಗಿದ್ದಾರೆ. ಜಮೀನಿನ ಬಳಿ ಕುರಿ ಮೇಯಿಸುವಾಗ ಚಿರತೆ ದಾಳಿ ನಡೆಸಿದೆ. ನರ ಭಕ್ಷಕ ಚಿರತೆಯು ಆನಂದಯ್ಯ ಅವರ ಕುತ್ತಿಗೆಯನ್ನು ಕಚ್ಚಿ ಕೊಂದು ಹಾಕಿದೆ.
ಕಳೆದ ತಿಂಗಳು ಇದೇ ಗ್ರಾಮದ ಬಳಿ ವೃದ್ದೆಯೊಬ್ಬರನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ಚಿರತೆ ದಾಳಿಯಿಂದ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನವನ್ನು ಖಂಡಿಸಿ ಸಾವಱಜನಿಕರು ಕುಣಿಗಲ್ ಶಾಸಕ ರಂಗನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದಿದ್ದ ಡಿಎಫ್ ಒ ಗಿರೀಶ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವಲ್ಲಿ ಹರಸಾಹಸ ಪಟ್ಟರು. ಅಲ್ಲದೆ ಆದಷ್ಟು ಬೇಗ ಚಿರತೆ ಸೆರೆಹಿಡಿಯುವುದಾಗಿ ಭರವಸೆ ನೀಡಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.