ETV Bharat / city

ಗುಬ್ಬಿಯಲ್ಲಿ ದಲಿತ ಮುಖಂಡ ನರಸಿಂಹಮೂರ್ತಿ ಕೊಲೆ ಪ್ರಕರಣ: 13 ಮಂದಿ ಬಂಧನ - ಬಂಧಿತ ಆರೋಪಿಗಳು

ಕೊಲೆಯಾದ ನರಸಿಂಹಮೂರ್ತಿ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಿರಣ್​ ನಡುವೆ ಗುಬ್ಬಿ ಪಟ್ಟಣದಲ್ಲಿ ಎರಡು ಕಡೆ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಜಗಳ ನಡೆದಿತ್ತು. ಮನಸ್ತಾಪ ಮೇರೆ ಮೀರಿದ್ದು, ನರಸಿಂಹಮೂರ್ತಿಯನ್ನು ಹಾಡಹಗಲೇ ಗುಬ್ಬಿ ಪಟ್ಟಣದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

Narasimhamoorthi
ಕೊಲೆಯಾಗಿದ್ದ ನರಸಿಂಹಮೂರ್ತಿ
author img

By

Published : Jun 27, 2022, 12:36 PM IST

ತುಮಕೂರು : ಇತ್ತೀಚಿಗೆ ಗುಬ್ಬಿ ಪಟ್ಟಣದಲ್ಲಿ ಹಾಡಹಗಲೇ ಕೊಲೆಗೀಡಾಗಿದ್ದ ನರಸಿಂಹಮೂರ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ಭೇದಿಸಿರುವ ತುಮಕೂರು ಜಿಲ್ಲಾ ಪೊಲೀಸರು, ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಜಮೀನು ವಿವಾದವೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 13 ಮಂದಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.

ಕೊಲೆ ನಡೆದ ಸಂದರ್ಭದಲ್ಲಿ ಏಳು ಮಂದಿ ಸ್ಥಳದಲ್ಲಿದ್ದರೂ, ಇನ್ನುಳಿದ ಆರು ಮಂದಿಗೆ ಸಹಕಾರ ನೀಡಿದ್ದಾರೆ. ಗುಬ್ಬಿ ತಾಲೂಕಿನ ಜೆ ಹೊಸಳ್ಳಿಯ ಕಿರಣ್ ಪ್ರಮುಖ ಆರೋಪಿಯಾಗಿದ್ದಾನೆ. ಮಂಡ್ಯ ತಾಲೂಕು ಹೊಳಲು ಗ್ರಾಮದ ರಾಜ, ಕೃಷ್ಣ ನಗರದ ಮಂಜು, ರಾಮನಗರ ಜಿಲ್ಲೆ ಬಿಡದಿ ಅಭಿಷೇಕ್, ಹೊಸೂರು ಗ್ರಾಮದ ಹೆಚ್.ಎಸ್. ಚಂದ್ರಶೇಖರ್, ಮೈಸೂರು ನಗರದ ಚಾಮುಂಡಿಬೆಟ್ಟ ರಸ್ತೆಯ ವೆಂಕಟೇಶ್ ಮಂಡಿ, ಮಹಲ ಕೀರ್ತಿ, ಗುಬ್ಬಿ ನಗರದ ಕರೆಕಲ್ಲು ನಿವಾಸಿಯಾದ ನಯಾಜ್, ವಿದ್ಯಾನಗರದ ಭರತ್, ಧೀರಜ್, ನಾಗರಾಜು, ಬಸವರಾಜು, ಬೆಂಗಳೂರಿನ ಪೀಣ್ಯ ಎರಡನೇ ಹಂತದ ನಿವಾಸಿ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಕೊಲೆಯಾದ ನರಸಿಂಹಮೂರ್ತಿ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಿರಣ್​ ನಡುವೆ ಗುಬ್ಬಿ ಪಟ್ಟಣದಲ್ಲಿ ಎರಡು ಕಡೆ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಜಗಳ ನಡೆದಿತ್ತು. ಮನಸ್ತಾಪ ಮೇರೆ ಮೀರಿದ್ದು, ನರಸಿಂಹಮೂರ್ತಿಯನ್ನು ಹಾಡಹಗಲೇ ಗುಬ್ಬಿ ಪಟ್ಟಣದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಪ್ರಕರಣ ಹಿನ್ನೆಲೆ: ಜೂನ್ 15ರಂದು ಡಿಎಸ್ಎಸ್ ಮುಖಂಡ ನರಸಿಂಹಮೂರ್ತಿ (45) ಎಂಬವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಗುಬ್ಬಿ ಪಟ್ಟಣದ ಬಿ.ಎಸ್.ರಸ್ತೆಯಲ್ಲಿ ಪ್ರಕರಣ ನಡೆದಿತ್ತು. ಡಿಎಸ್ಎಸ್ ತಾಲೂಕು ಸಂಚಾಲಕನಾಗಿದ್ದ ನರಸಿಂಹ ಮೂರ್ತಿ, ಮಧ್ಯಾಹ್ನ ಟೀ ಅಂಗಡಿ ಮುಂದೆ ಕುಳಿತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆದಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಪ್ರಾಪ್ತೆಯೊಂದಿಗೆ ಪ್ರೀತಿ: ಮದುವೆಗೆ ನಿರಾಕರಿಸಿದ್ದಕ್ಕೆ ಆಕೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡ ಯುವಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.