ETV Bharat / city

ಪ್ರೀತಿಯ ಬಲೆಗೆ ಬಿದ್ದು ಮನೆ ತೊರೆಯುತ್ತಿರುವ ನಾರಿಯರು.. ತುಮಕೂರಿನಲ್ಲಿ ಹೆಚ್ಚುತ್ತಿವೆ ನಾಪತ್ತೆ ಪ್ರಕರಣಗಳು! - ತುಮಕೂರು ಅಪರಾಧ ಸುದ್ದಿ

ತುಮಕೂರಿನಲ್ಲಿ ಆಘಾತಾಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಪ್ರೀತಿಯ ಬಲೆಗೆ ಬಿದ್ದ ಮನೆ ತೊರೆಯುತ್ತಿರುವ ನಾರಿಯರು ನಾಪತ್ತೆಯಾಗುತ್ತಿದ್ದು, ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳು ಪೊಲೀಸ್​ ಇಲಾಖೆಗೆ ತಲೆನೋವಾಗಿ ಪರಿಣಮಿಸಿವೆ.

Missing cases increasing in Tumkur, Tumkur crime news, Tumkur police department, ತುಮಕೂರಿನಲ್ಲಿ ಹೆಚ್ಚಾಗುತ್ತಿವೆ ನಾಪತ್ತೆ ಪ್ರಕರಣ, ತುಮಕೂರು ಅಪರಾಧ ಸುದ್ದಿ, ತುಮಕೂರು ಪೊಲೀಸ್​ ಇಲಾಖೆ,
ತುಮಕೂರಿನಲ್ಲಿ ಹೆಚ್ಚುತ್ತಿವೆ ನಾಪತ್ತೆ ಪ್ರಕರಣಗಳು
author img

By

Published : Mar 16, 2022, 12:26 PM IST

ತುಮಕೂರು: ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಸ್ತ್ರೀಯರು ಮತ್ತು ಬಾಲಕಿಯರ ಸಂಖ್ಯೆಯೇ ಗಣನೀಯವಾಗಿದೆ. ಅದರಲ್ಲೂ ಪ್ರೇಮ ಪ್ರಕರಣಗಳಿಗೆ ಸಿಲುಕುವ ಯುವತಿಯರು ಕಣ್ಮರೆಯಾಗುತ್ತಿದ್ದಾರೆ.

ಆಧುನಿಕ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆ ಹೆಚ್ಚುತ್ತಿದ್ದಂತೆ, ಪ್ರೀತಿ - ಪ್ರೇಮ ವಿಚಾರಗಳಲ್ಲಿ ಯುವತಿಯರು ಮೈಮರೆಯುತ್ತಿದ್ದಾರೆ. ಪ್ರೀತಿಯ ಬಲೆಗೆ ಬಿದ್ದು ಯುವತಿಯರು ಮನೆಯನ್ನೆ ತೊರೆಯುತ್ತಿದ್ದಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಒಟ್ಟು 3,065 ನಾಪತ್ತೆ ಪ್ರಕರಣಗಳು ದಾಖಲಾಗಿದೆ. ಅವರಲ್ಲಿ 1,966 ಮಹಿಳೆಯರು ಮತ್ತು 312 ಬಾಲಕಿಯರು ಸೇರಿದ್ದಾರೆ. ಇದಕ್ಕೆ ಪೂರಕವಾಗಿ 2021ರಲ್ಲಿ 541 ಮಹಿಳೆಯರು, 72 ಬಾಲಕಿಯರು ಕಾಣೆಯಾಗಿರುವುದು ಆತಂಕಕಾರಿಯಾಗಿದೆ.

ಓದಿ: ಕಾಂಗ್ರೆಸ್ ಸೇರ್ಪಡೆಯಾದ ನಿರ್ದೇಶಕ ಎಸ್.ನಾರಾಯಣ್: ಪಕ್ಷ ಸೇರ್ಪಡೆ ಬಗ್ಗೆ ಹೇಳಿದ್ದಿಷ್ಟು

ಅಲ್ಲದೆ 703 ಮಂದಿ ಪುರುಷರು ಕೂಡ ಕಳೆದ 5 ವರ್ಷದ ಅವಧಿಯಲ್ಲಿ ನಾಪತ್ತೆಯಾಗಿದ್ದಾರೆ. 84 ಬಾಲಕರು ಸೇರಿದ್ದಾರೆ. ಇನ್ನು ಮನೆಯಿಂದ ಓಡಿ ಹೋಗುವ ಮಕ್ಕಳು ತಂದ ಹಣ ಖಾಲಿಯಾದ ಬಳಿಕ ವಾಪಸ್ ಮನೆಗೆ ಬರುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಒಟ್ಟಾರೆ ವಿವಿಧ ಕಾರಣಗಳಿಂದ ಮನೆಬಿಟ್ಟು ಹೋಗುವವರ ಮಹಿಳೆಯರ ಸಂಖ್ಯೆಯೇ ಹೆಚ್ಚುತ್ತಿರುವುದು ಗಮನಾರ್ಹ ಅಂಶವಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್, ಉನ್ನತ ತಂತ್ರಜ್ಞಾನವನ್ನು ಬಳಸಿ ಕಾಣೆಯಾದವರ ಮೊಬೈಲ್ ಟ್ರಾಕಿಂಗ್​ನಿಂದ ಪತ್ತೆ ಮಾಡುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ. ಹೀಗಾಗಿ ಪೋಷಕರು ಮಕ್ಕಳು ಕಾಣೆಯಾದ ತಕ್ಷಣ ದೂರು ನೀಡಿದರೆ ಅವರನ್ನು ಶೀಘ್ರ ಪತ್ತೆ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.