ತುಮಕೂರು: ಯಾರೋ ತಲೆಕೆಟ್ಟವನು ಗುಟ್ಕಾ ನಿಷೇಧ ಮಾಡಿದರೆ, ಅಡಿಕೆಯನ್ನು ತಿನ್ನಲು ಅಲ್ಲ.. ದನಕ್ಕೆ ಮೇಯಲು ಹಾಕಲೂ ಸಾಧ್ಯವಿರುವುದಿಲ್ಲ. ಹೀಗಾಗಿ ಪರ್ಯಾಯ ಬೆಳೆಯತ್ತ ರೈತರು ಗಮನಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಓದಿ: ಕ್ರೂರಿ Coronaಗೆ ಒಂದೇ ದಿನ ತಾಯಿ - ಮಗ ಬಲಿ..
ತಿಪಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಗಿರಿಯಲ್ಲಿ ಅಡಿಕೆ ಗಿಡಗಳನ್ನು ರಾಗಿ ಬೆಳೆದಂತೆ ಬೆಳೆಯುತ್ತಿದ್ದರು. ಅದು ರಾಗಿ ಬಿತ್ತನೆ ಮಾಡಿದಂತೆ ಕಾಣುತ್ತಿತ್ತು. ಒಂದೇ ವರ್ಷದಲ್ಲಿ ನೀರು ಕಡಿಮೆಯಾಗಿ 15 ಸಾವಿರ ಎಕರೆ ಒಣಗಿಹೋಯಿತು. ನಾನೇ ಚಿಕ್ಕನಾಯಕನಹಳ್ಳಿ ತೋಟದಲ್ಲಿ ಅಡಿಕೆಗಳನ್ನು ಹಾಕಿಲ್ಲ. ಕನಿಷ್ಠ ಸಂಖ್ಯೆಯಲ್ಲಿ ಅಡಿಕೆ ಗಿಡಗಳನ್ನು ಬೆಳೆದಿದ್ದೇನೆ ಎಂದಿದ್ದಾರೆ.
ಪ್ರಕೃತಿಯಲ್ಲಿರೋ ಶೇ 2.5 ನೀರನ್ನು ಮಾತ್ರ ಬಳಸಬಹುದಾಗಿದೆ. ಇದನ್ನು ಅರ್ಥ ಮಾಡಿಕೊಂಡು ಭೂಮಿಯಲ್ಲಿ ನೀರು ಇರಿಸಿ ಹೋಗಬೇಕಿದೆ. ಎಷ್ಟು ಬೇಕೋ ಅಷ್ಟು ನೀರನ್ನು ಬಳಸಬೇಕು. ಹೆಚ್ಚು ನೀರನ್ನು ಅಪೇಕ್ಷೆ ಮಾಡೋ ಬೆಳೆಯನ್ನು ಬೆಳೆಯಲು ಮುಗಿಬೀಳಬೇಡಿ ಎಂದು ರೈತರಿಗೆ ಕಿವಿ ಮಾತು ಹೇಳಿದರು.