ETV Bharat / city

ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಕೋವಿಡ್​ ನಿರ್ವಹಣೆ ಪರಿಶೀಲಿಸಿದ ಸಚಿವ ಸುಧಾಕರ್ - ಸಚಿವ ಜೆ.ಸಿ.ಮಾಧುಸ್ವಾಮಿ

ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 4ರಷ್ಟಿದ್ದ ಕೊರೊನಾ ಪಾಸಿಟಿವಿಟಿ ರೇಟ್ ಇದೀಗ ಶೇ. 20ಕ್ಕೆ ತಲುಪಿದೆ. ಹೋಮ್​ ಐಸೋಲೇಷನಲ್ಲಿದ್ದವರನ್ನು ಕೋವಿಡ್​ ಕೇರ್ ಸೆಂಟರ್​ಗೆ ಯಾಕೆ ಶಿಫ್ಟ್ ಮಾಡಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅಧಿಕಾರಿಗಳಿಗೆ ಪ್ರಶ್ನಿಸಿದರು.

tumkur
ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಕೋವಿಡ್​ ನಿರ್ವಹಣೆ ಪರಿಶೀಲಿಸಿದ ಸಚಿವ ಸುಧಾಕರ್
author img

By

Published : May 21, 2021, 9:23 AM IST

ಚಿತ್ರದುರ್ಗ/ತುಮಕೂರು: ಆರೋಗ್ಯ ಸಚಿವ ಡಾ.ಸುಧಾಕರ್ ಚಿತ್ರದುರ್ಗ ಹಾಗು ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್​ ಚಿಕಿತ್ಸೆ ಮತ್ತು ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.

ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಕೋವಿಡ್​ ನಿರ್ವಹಣೆ ಪರಿಶೀಲಿಸಿದ ಸಚಿವ ಸುಧಾಕರ್

ಚಿತ್ರದುರ್ಗ ಜಿ.ಪಂ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ. 4ರಷ್ಟಿದ್ದ ಕೊರೊನಾ ಪಾಸಿಟಿವಿಟಿ ರೇಟ್ ಇದೀಗ ಶೇ. 20ಕ್ಕೆ ತಲುಪಿದೆ. ಹೋಮ್​ ಐಸೋಲೇಷನಲ್ಲಿದ್ದವರನ್ನು ಕೋವಿಡ್​ ಕೇರ್ ಸೆಂಟರ್​ಗೆ ಯಾಕೆ ಶಿಫ್ಟ್ ಮಾಡಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಕೇರ್ ಸೆಂಟರ್​ಗೆ ಶಿಫ್ಟ್ ಮಾಡದಿದ್ದರೆ ಕಷ್ಟವಾಗಲಿದೆ. ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ.ಪಾಲಾಕ್ಷ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗಮನ ಹರಿಸಿ, ಆಗುವ ಅನಾಹುತಗಳ ಮುಂಜಾಗ್ರತಾ ಕ್ರಮ ವಹಿಸಿ ಎಂದು ಸೂಚನೆ ನೀಡಿದರು.

ತುಮಕೂರು ಜಿಲ್ಲಾಸ್ಪತ್ರಗೆ ಭೇಟಿ

ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್, ಜಿಲ್ಲಾಧಿಕಾರಿ, ಡಿಎಚ್‍ಒ, ಡಿಎಸ್ ಹಾಗು ಸಂಬಂಧಿಸಿದ ವೈದ್ಯಾಧಿಕಾರಿಗಳಿಂದ ಕೋವಿಡ್-19 ಸಂಬಂಧದ ಸಂಪೂರ್ಣ ಮಾಹಿತಿ ಪಡೆದು ಬಳಿಕ ಕೆಲವು ಸೂಚನೆ ನೀಡಿದರು. ಈ ವೇಳೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಮಾಹಿತಿ ತಿಳಿಸಿದರು.

ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಆಸ್ಪತ್ರೆಯಲ್ಲಿ ಐಸಿಯು, ಆಮ್ಲಜನಕ ಹಾಸಿಗೆಗಳಲ್ಲಿ ಎಷ್ಟು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಸ್ಪತ್ರೆ ಮುಂಭಾಗದ ಫಲಕದಲ್ಲಿ ಪ್ರದರ್ಶಿಸಬೇಕು. ಟ್ರಯಾಜ್​ಗೆ ಮೊದಲ ಆದ್ಯತೆ ಕೊಡಬೇಕು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ ಟ್ರಯಾಜ್ ವ್ಯವಸ್ಥೆಯಾಗಬೇಕು ಎಂದು ನಿರ್ದೇಶಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಗರದಲ್ಲಿ ನರ್ಸಿಂಗ್​ ಹಾಸ್ಟೆಲ್ ನಿರ್ಮಾಣ ಮಾಡಿಕೊಡಿ. ಇನ್ನಷ್ಟು ವೆಂಟಿಲೇಟರ್ ಸಂಖ್ಯೆಯನ್ನು ಹೆಚ್ಚು ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಾಧುಸ್ವಾಮಿ ಅವರ ಬೇಡಿಕೆ ಈಡೇರಿಸುವುದಾಗಿ ಹೇಳಿದರು.

ಇದನ್ನೂ ಓದಿ: ಬಿಸಿಯೂಟದ ಆಹಾರಧಾನ್ಯ ಅಸಮರ್ಪಕ ವಿತರಣೆ: ಗೋದಾಮಿನಲ್ಲೇ ಧಾನ್ಯಗಳು ಹಾಳಾಗುವ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.