ತುಮಕೂರು/ಪಾವಗಡ: ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದ ಕನ್ನಯ್ಯ ದೇವಾಲಯದ ಸಮೀಪದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಯಾರೋ ಕಿಡಿಗೇಡಿಗಳು ಎರಡು ದಿನಗಳ ಹಿಂದೆಯೇ ಚಿರತೆಯನ್ನು ಕೊಂದಿದ್ದಾರೆ. ಕೊಂದ ಬಳಿಕ ತಂದು ಇಲ್ಲಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ಹಲ್ಲುಗಳನ್ನು ಕಿತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.