ತುಮಕೂರು : ಸಾವಿರಾರು ಕೋಟಿ ರೂ. ಹಗರಣವಾಗಿರೋ ಬಿಟ್ ಕಾಯಿನ್ ಪ್ರಕರಣ (Bitcoin scam) ಏನಾಗುತ್ತಿದೆ ಎಂದು ಸರ್ಕಾರವನ್ನು ಕೇಳುತ್ತಿದ್ದೇವೆ. ಹಗರಣದಲ್ಲಿ ಕಾಂಗ್ರೆಸ್ ರಾಜಕಾರಣಿಗಳೂ ಇದ್ದಾರೆ ಅಂತಾ ಹೇಳುತ್ತಿದ್ದಾರೆ. ಮೊದಲು ಅದನ್ನು ಸ್ಪಷ್ಟಪಡಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwara) ಸರ್ಕಾರಕ್ಕೆ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆಯಲ್ಲಿ ಶ್ರೀಕಿಯನ್ನು (Hacker Shreeki) ಹಿಡಿಯಲಾಗಿದೆ. ಅವನು ಇತರರ ಹೆಸರನ್ನು ಹೇಳಿದ್ದಾನೆ. ಅದನ್ನು ಬಹಿರಂಗಪಡಿಸಿ. ರಾಜ್ಯದ ಚುಕ್ಕಾಣಿ ಹಿಡಿದಿರುವವರು ಕಾರಣೀಭೂತರಾಗಿದ್ದು, ಅದಕ್ಕೋಸ್ಕರ ಅವರನ್ನು ಕೇಳುತ್ತಿದ್ದೇವೆ.
ಸುಮ್ಮನೆ ರಾಜಕೀಯ ಉದ್ದೇಶ ಎಂದು ಸರ್ಕಾರ ಭಾವಿಸಬಾರದು. ಸಿಎಂ ಮಾಹಿತಿ ತಿಳಿಸಬೇಕು, ಇಲ್ಲದಿದ್ದರೆ ತನಿಖೆ ಮಾಡುತ್ತಿದ್ದೇವೆ ಎಂದಾದರೂ ಹೇಳಬೇಕು ಎಂದರು. ಹ್ಯಾಕ್ ಮಾಡಿರುವುದಾಗಿ ಶ್ರೀಕಿನೇ ಒಪ್ಪಿಕೊಂಡಿದ್ದಾನೆ. ಆದ್ರೆ, ಯಾರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ ಎಂಬ ವಿಚಾರವನ್ನು ಬಹಿರಂಗ ಪಡಿಸಬೇಕಿದೆ.
ತಂತ್ರಜ್ಞಾನ ಗೊತ್ತಿರುವವರು ಇಲಾಖೆಯಲ್ಲಿ ಇದ್ದಾರೆ, ಅವರನ್ನು ಬಳಸಿಕೊಳ್ಳಲಿ. ಸಾಕಷ್ಟು ಮಂದಿ ಅಧಿಕಾರಿಗಳು ಇದ್ದಾರೆ ಅವರನ್ನು ಉಪಯೋಗಿಸಿಕೊಂಡು ಪ್ರಕರಣದ ತನಿಖೆಯನ್ನು ಮಾಡಲಿ ಎಂದಿದ್ದಾರೆ.