ETV Bharat / city

ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ನಾಲ್ವರು ಬೈಕ್ ಸವಾರರು ಸಾವು! - Tumkur road accident

ಮೂರು ಬೈಕ್​​ಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ಸಾವನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ..

tumkur
ತುಮಕೂರು
author img

By

Published : May 21, 2022, 12:46 PM IST

ತುಮಕೂರು : ಮೂರು ದ್ವಿ-ಚಕ್ರವಾಹನಗಳ ನಡುವೆ ಇಂದು ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಶೆಟ್ಟಿ ಗೊಂಡನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಬುಕ್ಕಾಪಟ್ಟಣದ ಭೂತೇಶ್ (25), ಶಶಿಧರ್(26), ನವೀನ್(28) ಮತ್ತು ಸಿಎಸ್ ಪುರ ಗ್ರಾಮದ ರಂಗನಾಥ್ (24) ಮೃತರು.

tumkur
ರಸ್ತೆ ಅಪಘಾತ : ಸ್ಥಳದಲ್ಲೇ ನಾಲ್ವರು ಬೈಕ್ ಸವಾರರು ಸಾವು

ಬುಕ್ಕಾಪಟ್ಟಣದಿಂದ ಯಡಿಯೂರು ಕಡೆಗೆ ಹೊರಟಿದ್ದ ಬೈಕ್​​ಗಳಿಗೆ ಸಿಎಸ್ ಪುರದಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧಾರವಾಡ ಬಳಿ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಏಳು ಜನ ಸ್ಥಳದಲ್ಲೇ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.