ತುಮಕೂರು: ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 69 ಮಂದಿಯ ರಕ್ತ ಮತ್ತು ಕಫದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಇಂದು 14 ಮಂದಿಯನ್ನ ಆಸ್ಪತ್ರೆಯ ಐಸೋಲೇಷನ್ನಲ್ಲಿಡಲಾಗಿದ್ದು, ಇವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ಮಾಹಿತಿ ನೀಡಿ, ಈವರೆಗೆ 308 ಶಂಕಿತರ ರಕ್ತ ಮತ್ತು ಕಫದ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಯಾಂಪಲ್ಗಳ ವರದಿಯಲ್ಲಿ 233 ನೆಗೆಟಿವ್ ಬಂದಿವೆ ಎಂದು ತಿಳಿಸಿದ್ದಾರೆ.

ಇದುವರೆಗೆ 480 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 100 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. 270 ಮಂದಿಯು 28 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 239 ಮಂದಿಯ ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿತ್ತು. ಇದುವರೆಗೆ ಇಬ್ಬರು ವ್ಯಕ್ತಿಗಳಲ್ಲಿ ಪಾಸಿಟಿವ್ ಬಂದಿತ್ತು. ಅದರಲ್ಲಿ ಸಿರಾ ಪಟ್ಟಣದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.