ETV Bharat / city

ಮನೆಯಲ್ಲೇ ಮತಹಾಕಲು ಅವಕಾಶ ಕೊಡಿ: ಮತದಾರರ ಮನವಿ

author img

By

Published : Oct 27, 2020, 5:19 PM IST

Updated : Oct 27, 2020, 5:43 PM IST

ಕೊರೊನಾ ಸೋಂಕು ಭೀತಿ ಹಿನ್ನೆಲೆ, ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಮನೆಯಲ್ಲೇ ಮತಚಲಾಯಿಸಲು ಅವಕಾಶ ನೀಡುವಂತೆ ಇಆರ್​ಎಂಎಸ್​​ ವೆಬ್​​ಸೈಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಕೊರೊನಾ ಸೋಂಕಿತರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

corona effect  Shira voters applied to vote from home
ಕೊರೊನಾ ಎಫೆಕ್ಟ್: ಮನೆಯಲ್ಲೇ ಮತಹಾಕಲು ಒಲವು ತೋರಿದ ಶಿರಾ ಮತದಾರರು..!

ತುಮಕೂರು: ಕೊರೊನಾ ಸೋಂಕು ಭೀತಿ ನಡುವೆಯೂ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ, ಪಕ್ಷಗಳು ಸಾಮಾಜಿಕ ಅಂತರ ಮರೆತು ಅಬ್ಬರದ ಪ್ರಚಾರ ನಡೆಸುತ್ತಿವೆ. ಇನ್ನೊಂದೆಡೆ ಸೋಂಕಿನ ಭೀತಿಯಿಂದ ಕಂಗೆಟ್ಟಿರುವ ಕ್ಷೇತ್ರದ ಮತದಾರರು ಮನೆಯಲ್ಲೇ ಮತ ಚಲಾಯಿಸಲು ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.

ಇಆರ್​ಎಂಎಸ್​​ ವೆಬ್​​ಸೈಟ್​​ನಲ್ಲಿ ಅರ್ಜಿ ಸಲ್ಲಿಸಿರುವರಲ್ಲಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಕೊರೊನಾ ಸೋಂಕಿತರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮನೆಗಳಲ್ಲಿಯೇ ಮತಚಲಾಯಿಸಲು ಅವಕಾಶ ನೀಡುವಂತೆ ಕೋರಿರುವರಲ್ಲಿ 80 ವರ್ಷ ಮೇಲ್ಪಟ್ಟ 2790 ಜನ, 2093 ಮಂದಿ ಅಂಗವಿಕಲರು, ಇನ್ನು 136 ಮಂದಿ ಕೊರೊನಾ ಸೋಂಕಿತರು ಸೇರಿದ್ದಾರೆ. ಇವರಲ್ಲಿ ಇದುವರೆಗೂ 3036 ಮಂದಿಗೆ ಮತ ಚಲಾಯಿಸಲು ಒಪ್ಪಿಗೆ ನೀಡಿದ್ದು, ಅದರಲ್ಲಿ 80 ವರ್ಷ ಮೇಲ್ಪಟ್ಟ 1666 ಹಿರಿಯ ನಾಗರೀಕರು, 1330 ಅಂಗವಿಕಲರು, 40 ಮಂದಿ ಕೊರೊನಾ ಸೋಂಕಿತರು ಇದ್ದಾರೆ.

ಹೀಗಿರಲಿದೆ ಮತ ಚಲಾವಣೆ:

ಈ ರೀತಿ ಮನೆಗಳಲ್ಲಿಯೇ ಮತಚಲಾಯಿಸಲು ಒಪ್ಪಿಗೆ ಸೂಚಿಸಿರುವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವ್ಯಕ್ತಿ ಇರುವ ಸ್ಥಳಕ್ಕೆ ತೆರಳುವ ಅಧಿಕಾರಿಗಳು ಗುಪ್ತ ಮತದಾನಕ್ಕೆ ಪೂರಕ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲಿ ವ್ಯಕ್ತಿಯು ಮತಚಲಾಯಿಸಿ ಮತಪತ್ರವನ್ನು ಸ್ಥಳಕ್ಕೆ ಬಂದಂತಹ ಚುನಾವಣಾ ಸಿಬ್ಬಂದಿಗೆ ನೀಡಬೇಕಿದೆ.

ಇಬ್ಬರು ಪೋಲಿಂಗ್ ಅಧಿಕಾರಿಗಳು, ಇಬ್ಬರು ವಿಡಿಯೋ ಗ್ರಾಫರ್, ಓರ್ವ ಪೊಲೀಸ್ ಸಿಬ್ಬಂದಿ ತೆರಳುತ್ತಾರೆ ಎಂದು ಚುನಾವಣಾಧಿಕಾರಿ ನಂದಿನಿ ದೇವಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Last Updated : Oct 27, 2020, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.