ತುಮಕೂರು : ಹೆರಿಗೆಯಾದ ಬಳಿಕ ಬಾಲ್ಯವಿವಾಹ ಪ್ರಕರಣ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಅಪ್ರಾಪ್ತೆಯ ಪತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪತಿ ವಿರುದ್ಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಧಾರಾಕಾರ ಮಳೆ : ದ್ವೀಪದಂತಾದ ಅಡಿಕೆ, ಎಲೆ ಬಳ್ಳಿ ತೋಟಗಳು.. ಈ ಕುರಿತ ವಾಕ್‌ಥ್ರೂ..
ಕೊರಟಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಹೆಣ್ಣು ಮಗು ಜನಿಸಿದೆ. ಬಾಲಕಿಯ ಜನ್ಮ ದಿನಾಂಕವನ್ನು ದಾಖಲೆಯಲ್ಲಿ ನಮೂದಿಸುವ ವೇಳೆ ಬಾಲ್ಯ ವಿವಾಹ ಆಗಿರುವುದು ಪತ್ತೆಯಾಗಿದೆ. ಅಪ್ರಾಪ್ತೆಯ ಪತಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಆತನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.