ETV Bharat / city

ಶಿರಾ ಬಳಿ 40 ಜನರಿದ್ದ ಬಸ್​​ನ ಆಕ್ಸೆಲ್ ಕಟ್.. ಹೀರೋ ಆದ ಡ್ರೈವರ್! - ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

40 ಜನರಿದ್ದ ಬಸ್​ನ ಆಕ್ಸೆಲ್ ಬ್ಲೇಡ್ ಕಟ್ ಆಗಿದ್ದು, ಚಾಲಕ ಸಮಯ ಪ್ರಜ್ಞೆ ಮೆರೆದು ಭಾರಿ ಅನಾಹುತ ತಪ್ಪಿಸಿದ್ದಾನೆ.

ಬಸ್​​ನ ಆಕ್ಸೆಲ್ ಕಟ್
ಬಸ್​​ನ ಆಕ್ಸೆಲ್ ಕಟ್
author img

By

Published : Jul 25, 2022, 4:04 PM IST

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್​ನ ಆಕ್ಸೆಲ್ ಬ್ಲೇಡ್ ತುಂಡಾದ ಪರಿಣಾಮ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಭಾರಿ ಅನಾಹುತ ತಪ್ಪಿದೆ. ಶಿರಾ ನಗರದ ಸಮೀಪ ಅಪಘಾತ ಸಂಭವಿಸಿದೆ.

ಶಿರಾ ನಗರದಿಂದ ಪಟ್ಟನಾಯಕಹಳ್ಳಿ ಕಡಗೆ ತೆರಳುತ್ತಿದ್ದ ಬಸ್ ಕಲ್ಲು ಕೋಟೆ ಪ್ರದೇಶದ ಸಮೀಪ ಬರುತ್ತಿದ್ದಂತೆ ಬಸ್‌ನ ಆಕ್ಸೆಲ್ ತುಂಡಾಗಿದೆ. ಇದರಿಂದ ಚಾಲಕನ ಹಿಡಿತ ತಪ್ಪಿ ಬಸ್ ರಸ್ತೆಯ ಪಕ್ಕದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದಿದೆ. ಆದರೆ ಈ ವೇಳೆ, ಚಾಲಕ ಚಾಣಾಕ್ಷತನದಿಂದ ಬಸ್ ನಿಯಂತ್ರಿಸಿದ್ದರಿಂದ ಸುಮಾರು 20 ಅಡಿ ಆಳದ ಸೇತುವೆ ಕೆಳಗೆ ಬಸ್ ಉರುಳಿ ಬೀಳುವುದು ತಪ್ಪಿದೆ.

ಶಿರಾ ಬಳಿ 40 ಜನರಿದ್ದ ಬಸ್​​ನ ಆಕ್ಸೆಲ್ ಕಟ್

ಬಸ್​ನಲ್ಲಿ ಸುಮಾರು 40 ಜನ ಪ್ರಯಾಣಿಸುತ್ತಿದ್ದು, ಕೆಲವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಸಾವಿನಲ್ಲೂ ಸ್ವಾಭಿಮಾನ; 20 ವರ್ಷದ ಮುಂಚಿತವಾಗಿ ಸಮಾಧಿ ನಿರ್ಮಾಣ - ಇಂದು ಅಂತ್ಯ ಸಂಸ್ಕಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.