ETV Bharat / city

ಉಪ ಚುನಾವಣೆಯಲ್ಲಿ 12 ಜನ ಗೆದ್ದು ಬಂದ ಮೇಲೆ ಬಿಜೆಪಿ ಸರ್ಕಾರ ಇನ್ನಷ್ಟು ಗಟ್ಟಿ: ಬಿ .ಸಿ. ಪಾಟೀಲ್ - B C Patil news

ರಾಜ್ಯ ಸರ್ಕಾರದಲ್ಲಿ ಕೆಲ ದಿನಗಳ ಹಿಂದೆ ಎದ್ದಿದ್ದ ಗೊಂದಲಗಳ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟನೆ ನೀಡುತ್ತಿದ್ದಾರೆ. ಇಂದು ತುಮಕೂರಿನಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವುದೇ ಗುಂಪುಗಾರಿಕೆ ಏನೂ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.

B C Patil
ಬಿ ಸಿ ಪಾಟೀಲ್
author img

By

Published : Jun 1, 2020, 5:45 PM IST

Updated : Jun 1, 2020, 7:04 PM IST

ತುಮಕೂರು: ಈಗೀಗ ಯಾರಾದರೂ ಊಟಕ್ಕೆ ಕರೆದ್ರೂ ಹೋಗೋದು ಕಷ್ಟವಾಗಿದೆ. ಹೋದ್ರೆ ಗುಂಪುಗಾರಿಕೆ ಅಂದ್ರೆ ಕಷ್ಟ ಅನ್ನುವಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಳಕು ತೋರ್ಪಡಿಸಿಕೊಂಡರು.

ತುರುವೇಕೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ, ಗುಂಪುಗಾರಿಕೆ ಏನೂ ಇಲ್ಲ. ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಅದ್ರಲ್ಲೂ ಉಪಚುನಾವಣೆಯಲ್ಲಿ 12 ಜನ ಗೆದ್ದು ಬಂದ ಮೇಲೆ ಬಿಜೆಪಿ ಸರ್ಕಾರ ಇನ್ನಷ್ಟು ಭದ್ರವಾಗಿದೆ. ನಮ್ಮಲ್ಲಿರುವ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.

ಕೃಷಿ ಸಚಿವ ಬಿ. ಸಿ. ಪಾಟೀಲ್ ಸುದ್ದಿಗೋಷ್ಠಿ

ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ವಿಶ್ಲೇಷಿಸಿದ ಅವರು, 2 ತಿಂಗಳು ಲಾಕ್​ಡೌನ್ ಆಗಿ ಶಾಸಕರು ಬೆಂಗಳೂರಿಗೆ ಬಂದಿರಲಿಲ್ಲ. ಈಗ ಬಂದಿದ್ದಾರೆ. ಬಂದ್ರೂ ಮಾತುಕತೆ ನಡೆಸೋಕೆ ಹೋಟೆಲ್​ಗಳೂ ತೆರೆದಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.

Last Updated : Jun 1, 2020, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.