ETV Bharat / city

ಗೋಡ್ಸೆ ಪರ ಟ್ವೀಟ್​​​​: ಕಟೀಲ್​​​ ವಿರುದ್ಧ ಎಫ್​ಐಆರ್​​​ ದಾಖಲಿಸಲು ಮನವಿ - undefined

ಗೋಡ್ಸೆಯನ್ನು ವಿಜೃಂಭಿಸುವ ರೀತಿಯಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಸಂಸದ ನಳೀನ್ ಕುಮಾರ್ ಕಟೀಲ್​ ವಿರುದ್ಧ ಎಫ್​ಐಆರ್​ ದಾಖಲಿಸಬೇಕೆಂದು ಆಗ್ರಹಿಸಿ ವಕೀಲ ರಮೇಶ್ ನಾಯಕ್ ತುಮಕೂರಿನ ಜೆಎಂಎಫ್​​ಸಿ ನ್ಯಾಯಾಲಯದದಲ್ಲಿ ಅರ್ಜಿ ಸಲ್ಲಿಸಿದ್ದಾರೆ

ತುಮಕೂರು
author img

By

Published : May 17, 2019, 6:41 PM IST

ತುಮಕೂರು: ಮಹಾತ್ಮ ಗಾಂಧಿಯವರನ್ನು ಕೊಂದ ಗೋಡ್ಸೆಯನ್ನು ವಿಜೃಂಭಿಸುವ ರೀತಿಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಸಂಸದ ನಳೀನ್ ಕುಮಾರ್ ಕಟೀಲ್​ ವಿರುದ್ಧ ಎಫ್​ಐಆರ್​ ದಾಖಲಿಸಬೇಕೆಂದು ಆಗ್ರಹಿಸಿ ವಕೀಲ ರಮೇಶ್ ನಾಯಕ್ ತುಮಕೂರಿನ ಜೆಎಂಎಫ್​​ಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮಾಧ್ಯಮದಲ್ಲಿ ಬಂದಂತಹ ಸುದ್ದಿಯನ್ನೇ ಸಾಕ್ಷ್ಯಾಧಾರವಾಗಿ ಆಧರಿಸಿ ಕಟೀಲ್ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ನಿದೇರ್ಶನ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ ಕ್ರಿಮಿನಲ್​ ವಿಚಾರಣೆ ನಡೆಯಬೇಕೆಂದೂ ಅವರು ಕೋರಿದ್ದಾರೆ.

ರಮೇಶ್​ ನಾಯಕ್​, ವಕೀಲ

ರಾಜಕಾರಣಿಗಳು ರಾಜಕೀಯವಾಗಿ ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದರೆ ಮಹಾತ್ಮರ ವಿರುದ್ಧ ಈ ರೀತಿ ಅವಹೇಳನಕಾರಿ ಹೇಳಿಕೆ ನೀಡಿ, ಜನರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ. ಹಿಂಸಾಚಾರಕ್ಕೆ ಇವರು ಪ್ರಚೋದಿಸುತ್ತಿದ್ದಾರೆ. ಇದು ಕ್ರಿಮಿನಲ್ ಪ್ರಕರಣವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ವಕೀಲ ರಮೇಶ್ ನಾಯಕ್ ತಿಳಿಸಿದರು.

Intro:ನಳಿನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಮೊರೆ ಹೋದ ವಕೀಲ......

ತುಮಕೂರು
ಮಹಾತ್ಮ ಗಾಂಧಿ ವಿರುದ್ಧ ಟ್ವಿಟರ್ ನಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವಹೇಳನಕಾರಿ ಪೋಸ್ಟ್ ಮಾಡಿದ್ದು ಅವರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕು ಮತ್ತು ಅದಕ್ಕೆ ಕ್ರಿಮಿನ ಲ್ ಟ್ರಯಲ್ ನಡೆಯಬೇಕು ಎಂದು ವಕೀಲ ರಮೇಶ್ ನಾಯಕ್ ತುಮಕೂರಿನ ಜೆ ಎಂ ಎಫ್ ಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದಲ್ಲಿ ಬಂದಂತಹ ಸುದ್ದಿಯ ಸಾಕ್ಷಾಧಾರಗಳನ್ನು ಆಧರಿಸಿ ನವೀನ್ ಕುಮಾರ್ ಕಟೀಲ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ತುಮಕೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ತಮ್ಮ ದೂರನ್ನು ದಾಖಲಿಸಿದ್ದಾರೆ.

ಅಲ್ಲದೆ ಕ್ಯಾಸಂದ್ರ ಪೊಲೀಸ್ ಠಾಣೆಯಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಬೇಕೆಂದು ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ತಮ್ಮ ರಾಜಕಾರಣವನ್ನು ಮಾಡಿಕೊಳ್ಳಲಿ ಆದರೆ ಮಹಾತ್ಮರ ವಿರುದ್ಧ ಈ ರೀತಿಯಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ವಕೀಲ ರಮೇಶ್ ನಾಯಕ್ ಇದೆ ವೇಳೆ ತಿಳಿಸಿದ್ದಾರೆ.Body:TumakuruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.