ETV Bharat / city

ಪಾವಗಡದಲ್ಲಿ ಕೋವಿಡ್ ಲಸಿಕೆ ಪಡೆದು ಮಾದರಿಯಾದ 93ರ ವೃದ್ಧೆ - ಕೋವಿಡ್ ಲಸಿಕೆ

ಪಾವಗಡ ಪಟ್ಟಣದ 23ನೇ ವಾರ್ಡ್​ನ ಕನುಮಲ ಚೆರುವು ಬಡಾವಣೆಯ 93 ವರ್ಷದ ವೃದ್ಧೆಯೊಬ್ಬರು ಉತ್ಸಾಹದಿಂದ ಬಂದು ಕೋವಿಡ್​ ವ್ಯಾಕ್ಸಿನ್​ ಪಡೆಯುವ ಮೂಲಕ ಲಸಿಕೆ ಪಡೆಯಲು ಹಿಂದೇಟು ಹಾಕುವವರಿಗೆ ಮಾದರಿಯಾದರು.

tumakuru
ಕೋವಿಡ್ ಲಸಿಕೆ ಪಡೆದು ಮಾದರಿಯಾದ 93ರ ವೃದ್ಧೆ
author img

By

Published : Jun 23, 2021, 7:50 AM IST

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ 93 ವರ್ಷದ ವೃದ್ಧೆಯೊಬ್ಬರು ಉತ್ಸಾಹದಿಂದ ಬಂದು ಕೋವಿಡ್‌ ವ್ಯಾಕ್ಸಿನ್​ ಪಡೆದು ಗಮನ ಸೆಳೆದರು.

ಪಟ್ಟಣದ 23ನೇ ವಾರ್ಡ್​ನ ಕನುಮಲ ಚೆರುವು ಬಡಾವಣೆ ಜನರಿಗೆ ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅರಿವು ಮೂಡಿಸಿದ್ದರು. ವ್ಯಾಕ್ಸಿನ್ ನೀಡುತ್ತಿರುವ ಬಗ್ಗೆ ತಿಳಿದ 93 ವರ್ಷದ ಬೀಬಿಜಾನ್ ಸ್ವಯಂಪ್ರೇರಿತರಾಗಿ ಬಂದು ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

ಜೊತೆಗೆ ಲಸಿಕೆ ಹಾಕಿಸಿಕೊಂಡರೆ ಅಡ್ಡ ಪರಿಣಾಮಗಳಾಗುತ್ತವೆ ಎಂದು ಅಪಪ್ರಚಾರ ಮಾಡುತ್ತಿರುವವರಿಗೆ ಬುದ್ದಿಮಾತು ಹೇಳಿದ್ದಾರೆ. ಈ ವಿಷಯ ತಿಳಿದ ವೈದ್ಯಕೀಯ ಸಿಬ್ಬಂದಿ ಬೀಬಿಜಾನ್ ಜವಾಬ್ದಾರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರ ಕೆಲಸವನ್ನ ಆದ್ಯತೆ ಮೇರೆಗೆ ಪರಿಗಣಿಸಿ: ಸರ್ಕಾರ ಸುತ್ತೋಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.