ತುಮಕೂರು: ಮನುಷ್ಯನ ಜೀವನದಲ್ಲಿ ಯೋಗ ಬಹಳ ಮುಖ್ಯ ಪಾತ್ರವಹಿಸುತ್ತದೆ. ಯೋಗ ಸಾಧನೆಯಿಂದ ಮಾನಸಿಕವಾಗಿ ಸದೃಢರಾಗಿದ್ದು, ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದವರೂ ನೆಮ್ಮದಿಯನ್ನು ಪಡೆದು ಬದುಕಿದವರಿದ್ದಾರೆ. ಇಂತಹ ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿರುವುದು ಭಾರತ.
ಇಂತಹ ಯೋಗದ ಮಹತ್ವ ಸಾರಲು ದೇಶದ 390 ಶಾಲೆಗಳ ಶ್ರೀಚೈತನ್ಯ ಟೆಕ್ನೋ ಶಾಲೆಗಳ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗ ಮಾಡುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ತುಮಕೂರಿನ ಶ್ರೀಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 70 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡು ನೂತನ ದಾಖಲೆ ಸೃಷ್ಟಿಸಿದರು.
ಒಂದನೇ ತರಗತಿಯಿಂದ ಹಿಡಿದು ಐದನೇ ತರಗತಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಲು ಏಲಿಟ್ ವರ್ಡ್ ರೆಕಾರ್ಡ್ ಕಂಪನಿ, ಏಷ್ಯನ್ ವರ್ಲ್ಡ್ ರೆಕಾರ್ಡ್ ಕಂಪನಿ, ಇಂಡಿಯಾ ರೆಕಾರ್ಡ್ ಕಂಪನಿಗಳು ಪಾಲ್ಗೊಂಡಿದ್ದವು.