ETV Bharat / city

ವಿಷ ಆಹಾರ ಸೇವಿಸಿ 17 ಕುರಿಗಳು ಸಾವು - ಕೊರಟಗೆರೆ ತಾಲೂಕಿನ ದೊಡ್ಡನರಸಯ್ಯನ ಪಾಳ್ಯದಲ್ಲಿ ಕುರಿ ಸಾವು

ವಿಷಾಹಾರ ಸೇವಿಸಿ 17 ಕುರಿಗಳು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೊಡ್ಡನರಸಯ್ಯನ ಪಾಳ್ಯದಲ್ಲಿ ನಡೆದಿದೆ.

17 sheep died in tumkur
ಕೊರಟಗೆರೆ ತಾಲೂಕಿನ ದೊಡ್ಡನರಸಯ್ಯನ ಪಾಳ್ಯದಲ್ಲಿ 17 ಕುರಿಗಳು ಸಾವು
author img

By

Published : Mar 7, 2020, 4:59 AM IST

ತುಮಕೂರು: ವಿಷಾಹಾರ ಸೇವಿಸಿ 17 ಕುರಿಗಳು ಮೃತಪಟ್ಟ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ದೊಡ್ಡನರಸಯ್ಯನ ಪಾಳ್ಯದಲ್ಲಿ ನಡೆದಿದೆ.

ಕೊರಟಗೆರೆ ತಾಲೂಕಿನ ದೊಡ್ಡನರಸಯ್ಯನ ಪಾಳ್ಯದಲ್ಲಿ 17 ಕುರಿಗಳು ಸಾವು

ದೊಡ್ಡನರಸಯ್ಯನ ಪಾಳ್ಯದ ನಿವಾಸಿಗಳಾದ ವೀರಭದ್ರಪ್ಪ ಎಂಬುವರಿಗೆ ಸೇರಿದ 10 ಕುರಿಗಳು, ನರಸಿಂಹಯ್ಯ ಎಂಬುವರಿಗೆ ಸೇರಿದ ಐದು ಕುರಿ, ಕೆಂಪರಾಮಯ್ಯ ಎಂಬುವರಿಗೆ ಸೇರಿದ ಎರಡು ಕುರಿಗಳು ಮೃತಪಟ್ಟಿವೆ. ಜೊತೆಗೆ 10ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ನಿನ್ನೆ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಹಳ್ಳದಲ್ಲಿ ನೀರು ಕುಡಿದ ನಂತರ ಅಸ್ವಸ್ಥಗೊಂಡು ಕುಸಿದು ಬಿದ್ದಿವೆ. ಕುರಿಗಳು ಜಾಲಿಕಾಯಿ ತಿಂದಿರಬಹುದು ಎಂದು ಕುರಿಗಾಹಿಗಳು ಶಂಕಿಸಿದ್ದಾರೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಾಧಿಕಾರಿಗಳು, ಅಸ್ವಸ್ಥಗೊಂಡಿದ್ದ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ಮೃತ ಕುರಿಗಳ ಸ್ಯಾಂಪಲ್ ಪಡೆದು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.