ETV Bharat / city

ಬಿಎಸ್​ವೈ, ಶೋಭಾ ವಾಮಾಚಾರ ಮಾಡಿಸಿದ್ದರಿಂದ 3 ತಿಂಗಳು ಮಂಕಾಗಿದ್ದೆ: ಗೋಪಾಲಕೃಷ್ಣ - kannada news

ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಇಬ್ಬರೂ ಸೇರಿ ನನಗೆ ವಾಮಾಚಾರ ಮಾಡಿಸಿದ್ದಿರಬೇಕು. ಇದರಿಂದ ಮೂರು ತಿಂಗಳು ಕಾಲ ಮಂಕಾಗಿದ್ದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
author img

By

Published : Apr 2, 2019, 6:38 PM IST

Updated : Apr 2, 2019, 8:05 PM IST

ಶಿವಮೊಗ್ಗ: ಯಡಿಯೂರಪ್ಪ ಹಾಗೂ ಶೋಭಾ ಅವರು ಯಾವಾಗ್ಲೂ ಕೇರಳದಲ್ಲಿಯೇ ಹೋಮ, ಪೂಜೆ ಮಾಡಿಸುತ್ತಿರುತ್ತಾರೆ. ಇದರಿಂದ ನನಗೆ ಅವರೇ ವಾಮಾಚಾರ ಮಾಡಿಸಿರಬೇಕು ಎಂದು ಬೇಳೂರು ಗೋಪಾಲಕೃಷ್ಣ ಶಂಕೆ ವ್ಯಕ್ತಪಡಿಸಿದ್ದಾರೆ.

ಸಾಗರದಲ್ಲಿ ನನಗೆ ಟಿಕೆಟ್ ತಪ್ಪಲು ಹಾಲಿ ಸಂಸದ ರಾಘವೇಂದ್ರ, ವಿಜಯೇಂದ್ರ ಅವರ ಸಿಡಿ ಹಾಲಪ್ಪ ಬಳಿ ಇರುವುದೇ ಕಾರಣ ಎಂದು ಹೇಳಿದ್ದೆ. ಸಾಗರದಲ್ಲಿ ವಿಜಯೇಂದ್ರ ಅವರ ಸಮೀಕ್ಷೆಯಲ್ಲಿ ಹಾಲಪ್ಪ ಹೆಸರು ಇಲ್ಲದೆ ಹೋದ್ರು ಸಹ ಕೊನೆಯಲ್ಲಿ ಅವರಿಗೆ ಟಿಕೆಟ್ ನೀಡಬೇಕಾಯ್ತು ಎಂದು ಬೇಳೂರು ದೂರಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಈ ಬಾರಿ ಎರಡು ಪಕ್ಷಗಳ ಮುಖಂಡರು‌ ಒಟ್ಟಾಗಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುತ್ತೇವೆ. ಬಿಜೆಪಿಯಲ್ಲಿಯೇ ರಾಘವೇಂದ್ರ ಬಗ್ಗೆ ನಿರಾಸಕ್ತಿ ಇದೆ. ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡರು ತಮ್ಮವರಿಗೇ ಮಾತ್ರ ಟಿಕೆಟ್ ನೀಡಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

Intro:ಯಡಿಯೂರಪ್ಪ ಹಾಗೂ ಶೋಭ ಕರದ್ಲಂಜೆ ರವರಯ ಸೇರಿ ನನಗೆ ವಾಮಾಚಾರ ಮಾಡಿಸಿದ್ದಿರಬೇಕು ಇದರಿಂದ ಮೂರು ತಿಂಗಳು ನಾನು ಮಂಕಾಗಿದ್ದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಗಂಭೀರ ಆರೋಪವನ್ನು ಶಿವಮೊಗ್ಗದಲ್ಲಿ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಶೋಭರವರು ಯಾವಾಗ್ಲೂ ಸಹ ಕೇರಳದಲ್ಲಿಯೇ ಹೋಮ, ಪೊಜೆ ಮಾಡಿಸುತ್ತಿರುತ್ತಾರೆ ಇದರಿಂದ ನನಗೆ ಅವರೆ ಮಾಠ ಮಾಡಿಸಿರಬೇಕು ಎಂದರು.

Body:ಸಾಗರದಲ್ಲಿ ನನಗೆ ಟಿಕೇಟ್ ತಪ್ಪಲು ಸಾಗರದ ಹಾಲಿ ಶಾಸಕರು ರಾಘವೇಂದ್ರ, ವಿಜಯೇಂದ್ರ ರವರ ಸಿಡಿ ಇರುವ ಕಾರಣ ಟಿಕೇಟ್ ತಪ್ಪಿದೆಂದು ಹಿಂದೆ ಹೇಳಿದ್ದೆ. ಮೊನ್ನೆ ಸಾಗರದಲ್ಲಿ ವಿಜಯೇಂದ್ರ ರವರು ಸಮೀಕ್ಷೆ ಯಲ್ಲಿ ಹಾಲಪ್ಪನವರ ಹೆಸರು ಇಲ್ಲದೆ ಹೋದ್ರು ಸಹ ಕೊನೆಯಲ್ಲಿ ಅವರಿಗೆ ಟಿಕೇಟ್ ನೀಡ ಬೇಕಾಯ್ತು ಎಂದು ಹೇಳಿದ್ದಾರೆ. ಇದರಿಂದ ಚುನಾವಣೆಯಲ್ಲಿ ಹೇಳಿದ ಮಾತು ಸತ್ಯವಾಗಿದೆ ಎಂದರು.

Conclusion:ಈ ಬಾರಿ ಎರಡು ಪಕ್ಷದ ಮುಖಂಡರು‌ ಸೇರಿ ಮಧು ಬಂಗಾರಪ್ಪನವರನ್ನು ಗೆಲ್ಲಿಸುತ್ತೆವೆ. ಬಿಜೆಪಿಯಲ್ಲಿಯೇ ರಾಘವೇಂದ್ರನ ಬಗ್ಗೆ ಇಂಟರೆಸ್ಟ್ ಕಡಿಮೆಯಾಗಿದೆ. ಬಿಜೆಪಿಯ ರುದ್ರೆಗೌಡರು ಎಲ್ಲಾ ತಮ್ಮವರಿಗೆ ಟಿಕೇಟ್ ನೀಡಿದ್ದಾರೆ ಎಂದರು. 3.50 ಲಕ್ಷ ಲೀಡ್ ನ್ನು 50 ಸಾವಿರಕ್ಕೆ ತಂದು ನಿಲ್ಲಿಸಿದ್ದೆವೆ ಎಂದರು.
Last Updated : Apr 2, 2019, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.